February 1, 2026

ಬೆಳ್ಳಾರೆ: ಗುಡ್ಡದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ ಪ್ರಕರಣ: ವ್ಯವಸ್ಥಿತವಾಗಿ ಕೊಲೆಗೈದು ನಾಪತ್ತೆ ಕಥೆ ಕಟ್ಟಿದ ಸಹೋದರ

0
depositphotos_162420420-stock-illustration-breaking-news-television-tv-screen

ಬೆಳ್ಳಾರೆ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡು ಗ್ರಾಮದ ಬೊಳಿಯಾಲ ಎಂಬಲ್ಲಿ
ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಗುಡ್ಡದಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇದೊಂದು ವ್ಯವಸ್ಥಿತ ಕೊಲೆ ಕೃತ್ಯವನ್ನು ಪೊಲೀಸರು ಬಯಲಿಗೆ ಎಳೆದಿದ್ದಾರೆ.

ಮೃತ ಶೇಷಪ್ಪ ಪೂಜಾರಿ ಅವರ ತಮ್ಮ ಪಾಲ್ತಾಡು ಗ್ರಾಮದ ಬಾಲಕೃಷ್ಣ ಪೂಜಾರಿ(65) ಅವರ ಪುತ್ರ ವೇಣು ಗೋಪಾಲ ಆರೋಪಿಗಳಾಗಿದ್ದು, ಆಸ್ತಿಗಾಗಿ ವ್ಯವಸ್ಥಿತವಾಗಿ ಕೊಲೆ ಮಾಡಿ, ನಾಪತ್ತೆಯಾಗಿದ್ದಾರೆಂದು ಕಥೆ ಕಟ್ಟಿದ್ದರು.

ಶೇಷಪ್ಪ ಪೂಜಾರಿ(76) ಅವರು 1980 ರಿಂದ ಪತ್ನಿ ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು , ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಬಂದ ಹಣವನ್ನು ಮದ್ಯ ಸೇವನೆ ಮಾಡುತ್ತಾ ಇದ್ದು , ಸುಮಾರು 1 ವರ್ಷಗಳಿಂದ ಬಲ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಅವರ ತಮ್ಮ ಬಾಲಕೃಷ್ಣ ಪೂಜಾರಿಯವರ ಮನೆಯಾದ ಪಾಲ್ತಾಡು ಗ್ರಾಮದ ಬೊಳಿಯಾಲ ಎಂಬಲ್ಲಿ ವಿಶ್ರಾಂತಿಯಲ್ಲಿದ್ದರು.

ಶೇಷಪ್ಪ ಪೂಜಾರಿಯವರ ಮೃತದೇಹವು ಬೊಳಿಯಾಲ ಎಂಬಲ್ಲಿ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ಸರಕಾರಿ ಗುಡ್ಡ ಜಮೀನಿನಲ್ಲಿ ಕೆಲವು ತಿಂಗಳ ಹಿಂದೆ ಮೃತಪಟ್ಟು ಕೊಳಕುಹೋಗಿ ಅಸ್ತಿಪಂಜರ ಹಾಗೂ ಮೂಳೆಗಳು ಬಿದ್ದುಕೊಂಡಿರುವ ವಿಚಾರ ತಿಳಿದು , ತಂದೆಯವರ ಮರಣದಲ್ಲಿ ಸಂಶಯ ಇರುವುದಾಗಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದಂತೆ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ಅಸ್ತಿಪಂಜರ ಹಾಗೂ ಮೂಳೆಗಳನ್ನು ನೋಡಿ , ಮೃತ ಶೇಷಪ್ಪ ಪೂಜಾರಿಯವರಿಗೆ 75 ವರ್ಷ ಪ್ರಾಯವಾಗಿದ್ದು , ಹಾಗೂ ಸುಮಾರು 1 ವರ್ಷಗಳ ಹಿಂದೆ ಬಲ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಶಸ್ತ್ರ ಚಿಕಿತ್ಸೆಯ ಬಳಿಕ ತಮ್ಮ ಬಾಲಕೃಷ್ಣ ಪೂಜಾರಿಯವರ ಮನೆಯಾದ ಬೊಳಿಯಾಲದಲ್ಲಿ ವಿಶ್ರಾಂತಿಯಲ್ಲಿದ್ದು , ತಂದೆ ಶೇಷಪ್ಪ ಪೂಜಾರಿಯವರನ್ನು ಅವರ ಪಾಲಿನ ಜಮೀನನ್ನು ವಶಕ್ಕೆ ಪಡೆಯುವ ಅಥವಾ ವೃದ್ಧ ಶೇಷಪ್ಪ ಪೂಜಾರಿಯವರ ಆರೈಕೆ ಮಾಡಲು ಬೇಸತ್ತು ತಮ್ಮ ಬಾಲಕೃಷ್ಣ ಪೂಜಾರಿ ಹಾಗೂ ಅವರ ಮಗ ವೇಣು ಗೋಪಾಲನು ಯಾವುದೋ ರೀತಿಯಲ್ಲಿ ಕೊಲೆ ಮಾಡಿ , ಯಾರಿಗೂ ತಿಳಿಯದಂತೆ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧ ಪಟ್ಟ ಗುಡ್ಡ ಜಾಗದಲ್ಲಿ ಹಾಕಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!