August 20, 2026

ಯಲಹಂಕ: 16ರ ಬಾಲಕಿಯ ಗ್ಯಾಂಗ್ ರೇಪ್, ಬ್ಲ್ಯಾಕ್‌ಮೇಲ್‌: 7 ಜನರ ಬಂಧನ

0
image_editor_output_image-1592805538-1649513314378.png

ಬೆಂಗಳೂರು: 16 ವರ್ಷದ ಬಾಲಕಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದ್ದು, ಪ್ರಮುಖ ಆರೋಪಿಯು ಈ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು ಮತ್ತು ಕೃತ್ಯವನ್ನು ಚಿತ್ರೀಕರಿಸಿದ್ದನು. ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಅದೇ ವೀಡಿಯೊವನ್ನು ಬಳಸಲಾಗಿದೆ. ಹಲ್ಲೆ ನಡೆಸಿರುವ ವಿಚಾರವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ.

ಈ ವಿಡಿಯೋವನ್ನು ಪ್ರಮುಖ ಆರೋಪಿಯ ಸ್ನೇಹಿತರೊಂದಿಗೂ ಹಂಚಿಕೊಳ್ಳಲಾಗಿದೆ. ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬಾಲಕಿಗೆ ಮತ್ತೆ ಬ್ಲಾಕ್‌ಮೇಲ್ ಮಾಡಿ, ಪ್ರಮುಖ ಆರೋಪಿ ತನ್ನ ಏಳು ಜನ ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಳುತ್ತಾ ಮನೆಗೆ ಬಂದ ಸಂತ್ರಸ್ತೆಯ ಪೋಷಕರು ಮನವೊಲಿಸಿ ಏನಾಯಿತು ಎಂಬುದನ್ನು ತಿಳಿದುಕೊಂಡ ಬಳಿಕ ಸಂತ್ರಸ್ತೆಯ ತಾಯಿ ಏಪ್ರಿಲ್ 5 ರಂದು ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!