August 20, 2026

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್

0
image_editor_output_image1896382328-1649486365029.jpg

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಚೇರಿಯ ಟ್ವಿಟರ್ ( ಯುಪಿ ಸಿಎಂಒ) ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ಶನಿವಾರ ನಸುಕಿನ ಜಾವ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಬಳಿಕ ಕೆಲವೇ ಗಂಟೆಗಳಲ್ಲಿ ಮತ್ತೆ ಖಾತೆಯನ್ನು ಮರು ಸ್ಥಾಪಿಸಲಾಗಿದೆ.

ಹೌ ಟೂ ಟರ್ನ್ ಯುವರ್ BAYC/MAYC ಅನಿಮೇಟೆಡ್ ಆನ್ ಟ್ವೀಟರ್ ಎಂಬ ಟ್ಯುಟೋರಿಯಲ್ ಪೋಸ್ಟ್ ಯುಪಿ ಸಿಎಂಒ ಖಾತೆಯಿಂದ ಟ್ವೀಟ್ ಆಗಿದ್ದು ಈ ಸಂದರ್ಭ ಖಾತೆ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಜೊತೆಗೆ ಹ್ಯಾಕರ್‌ಗಳು ಖಾತೆಯ ಪ್ರೊಫೈಲ್ ಚಿತ್ರವನ್ನು ಕೂಡ ಬದಲಾಯಿಸಿದ್ದಾರೆ.

ಹ್ಯಾಕ್ ಆಗಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ್‌ ಖಾತೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಟ್ವೀಟರ್ ಖಾತೆಯನ್ನು ಮತ್ತೆ ಸುಸ್ಥಿತಿಗೆ ತರಲಾಗಿದ್ದು, ಹ್ಯಾಕರ್‌ಗಳು ಪೋಸ್ಟ್ ಮಾಡಿದ ಎಲ್ಲಾ ಟ್ವೀಟ್‌ಗಳನ್ನು ಅಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!