September 25, 2026

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯೇರಿಕೆ ವಿರುದ್ಧ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಪ್ರತಿಭಟನೆ

0
IMG-20220408-WA0000.jpg

ಮಂಜೇಶ್ವರ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯೇರಿಕೆ ವಿರುದ್ಧ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಹೊಸಂಗಡಿ ಪ್ರಧಾನ ಅಂಚೆ ಕಚೇರಿಗೆ ಪ್ರತಿಭಟನೆ ನಡೆಯಿತು.

ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ರಾಜನ್ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಪಿಳ್ ಪ್ರತಿಭಟನಾ ಚಳುವಳಿ ಉದ್ಘಾಟಿಸಿದರು.

 

ಮಂಡಲ ಸಹ ಕಾರ್ಯದರ್ಶಿ ಎಸ್.ರಾಮಚಂದ್ರ, ಸಿಪಿಐ ಮಂಜೇಶ್ವರ ಮಂಡಲ ಸಮಿತಿ ಸದಸ್ಯರಾದ ಗಂಗಾಧರ್ ಕೊಡ್ಡೆ, ಮೋಟಾರ್ ಕಾರ್ಮಿಕರ ಯೂನಿಯನ್(ಎಐಟಿಯುಸಿ)ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ, ಸಿಪಿಐ ಬ್ರಾಂಚ್ ಕಾರ್ಯದರ್ಶಿಗಳಾದ ಪ್ರದೀಶ್ ಬಡಾಜೆ, ಕಿರಣ್ ಮಾಡ, ಯತೀಶ್ ಬಿ.ಎಂ, ಉಮೇಶ್ ಪದವು, ರಮೇಶ್ ಉದ್ಯಾವರ, ಫಾರೂಕ್ ಉಪ್ಪಳ, ಲೋಕೇಶ್ ಪಾವಳ,ಕೊರಗಪ್ಪ ಹೆದ್ದಾರಿ, ಭುಜಂಗ ವರ್ಕಾಡಿ,ಪ್ರಶಾಂತ್ ಉಪ್ಪಳ,ಮಹಿಳಾ ನೇತಾರೆ ಎಸ್. ಕಮಲ, ನಿಶಾ ಹೊಸಂಗಡಿ, ಎಐವೈಎಫ್ ಮಂಜೇಶ್ವರ ಮಂಡಲ ಅಧ್ಯಕ್ಷ ದಯಾಕರ ಮಾಡ, ಎಐವೈಎಫ್ ನೇತಾರರಾದ ಶರತ್ ಬೆಜ್ಜ, ಪ್ರಥಮ್ ಕಣ್ವತೀರ್ಥ, ಶನೀಶ್ ಮಂಜೇಶ್ವರ, ಧನ್ ರಾಜ್ ಕೀರ್ತೇಶ್ವರ, ಮುರಳಿ ಗುತ್ತು, ನಿರಂಜನ್ ಕಣ್ವತೀರ್ಥ, ಮುನೀರ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಕಾರ್ಯದರ್ಶಿ ಜಯರಾಮ್ ಬಲ್ಲಂಗುಡೇಲ್ ಸ್ವಾಗತಿಸಿ, ಎಸ್.ರಾಮಚಂದ್ರ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!