February 2, 2026

ಸಿನೆಮಾದಲ್ಲಿ ನಟಿಸುವ ಆಸೆ ತೋರಿಸಿ ದುಬೈಗೆ ಅಕ್ರಮ ಚಟುವಟಿಕೆಗೆ ದೂಡುತ್ತಿದ್ದ ಜಾಲವನ್ನು ಭೇದಿಸಿದ ಪೊಲೀಸರು: 4 ಆರೋಪಿಗಳ ಬಂಧನ

0
Screenshot_2022-04-08-04-45-00-03_680d03679600f7af0b4c700c6b270fe7.jpg

ಬೆಂಗಳೂರು: ದುಬಾೖಯ ಸಿನೆಮಾ ರಂಗದಲ್ಲಿ ದುಡಿದರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ದಕ್ಷಿಣ ಭಾರತದ ಸಿನೆಮಾ ರಂಗದ  ಮಹಿಳಾ  ಕಲಾವಿದರನ್ನು ಪುಸಲಾಯಿಸಿ ವಿದೇಶಕ್ಕೆ ಕಳುಹಿಸಿ ಅಕ್ರಮ ಚಟುವಟಿಕೆಗೆ ದೂಡುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣ ದಳ ವಿಭಾಗ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದೆ.

ತಮಿಳುನಾಡಿನ ನಾಲ್ವರು ಮತ್ತು ಕರ್ನಾಟಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಪ್ಪಳ ತಾಲೂಕಿನ ಬಸವರಾಜು ಶಂಕರಪ್ಪ ಕಳಸದ್‌ (47), ಮೈಸೂರಿನ ನಜರಾಬಾದ್‌ನ ಆದರ್ಶ್‌ ಅಲಿಯಾಸ್‌ ಆದಿ (27), ತಮಿಳುನಾಡಿನ ಎಡಪಾಡಿ ನಿವಾಸಿ ರಾಜೇಂದ್ರ ನಾಚಿಮುತ್ತು (37), ಚೆನ್ನೈ ಮಾರಿಯಪ್ಪನ್‌ (44), ಟಿ.ಅಶೋಕ್‌ (29), ರಾಜೀವ್‌ಗಾಂಧಿ (35) ಮತ್ತು ಜೆ.ಪಿ.ನಗರದ ಆರ್‌.ಚಂದು (20) ಬಂಧಿತರು.

ಆರೋಪಿಗಳ ಪೈಕಿ ಪ್ರಕರಣದ ಮಾಸ್ಟರ್‌ ಮೈಂಡ್‌ ಬಸವರಾಜು ಶಂಕರಪ್ಪ ಕಳಸದ್‌ ವಿರುದ್ಧ 2020ರಲ್ಲಿ ನಂದಿನಿ ಲೇಔಟ್‌ ಠಾಣೆಯಲ್ಲಿ ಕೆಲವು ಮಹಿಳೆಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಅಲ್ಲಿನ ಡ್ಯಾನ್ಸ್‌ ಬಾರ್‌ಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಜಾಮೀನು ಪಡೆದು ಹೊರಬಂದಿರುವ ಆರೋಪಿ, ಈಗ ಮತ್ತೆ ಅದೇ ದಂಧೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

error: Content is protected !!