ಉಡುಪಿ ಮೂಲದ ಇಬ್ಬರಿಗೆ ಗುಂಡೇಟು: ಆಸ್ಪತ್ರೆಗೆ ದಾಖಲು
ಬೆಂಗಳೂರು: ವಿದ್ಯಾರ್ಥಿಯೊಬ್ಬನನ್ನು ಅಡ್ಡಗಟ್ಟಿ ಅಪಹರಿಸಿ, ಹಣ ದರೋಡೆ ಮಾಡಿದ್ದಲ್ಲದೆ, ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಉಡುಪಿ ಮೂಲದ ಇಬ್ಬರು ನಟೋರಿಯಸ್ ಸುಲಿಗೆಕೋರರಿಗೆ ಕೊತ್ತನೂರು ಠಾಣೆ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.
ಉಡುಪಿಯ ಕಾಪು ತಾಲೂಕಿನ ಮೊಹಮ್ಮದ್ ಆಶೀಕ್ (22) ಮತ್ತು ಕುಂದಾಪುರ ತಾಲೂಕಿನ ಇಸಾಕ್ (21) ಎಂಬವರಿಗೆ ಗುಂಡೇಟು ತಗಲಿದೆ. ಇಬ್ಬರನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳಿಂದ ಹತ್ತು ಮೊಬೈಲ್‌ಗಳು, ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಆರೋಪಿಗಳ ಹಲ್ಲೆಯಿಂದ ಪಿಎಸ್‌ಐ ಉಮೇಶ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




