March 19, 2026

ವಿಟ್ಲ: ಬೈಕ್ ಗೆ ಡಿಕ್ಕಿ ಹೊಡೆದ 112 ತುರ್ತು ಸೇವೆಯ ವಾಹನ: ಇಬ್ಬರು ಬೈಕ್ ಸವಾರರಿಗೆ ಗಾಯ

0
image_editor_output_image452549099-1649057647322.jpg

ವಿಟ್ಲ: ಕಡೂರು – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಕಾಶಿಮಠದಲ್ಲಿ ನಿಂತಿದ್ದ ಬೈಕ್ ಗೆ 112 ತುರ್ತು ಸೇವೆಯ ವಾಹನ ಢಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿದ್ದಾರೆ.

ವಿನಯ್ (35), ಶಿವರಾಮ್ (22) ಅಪಘಾತದಿಂದ ಗಾಯಗೊಂಡಿದ್ದಾರೆ.

ಉಕ್ಕುಡ ಕಡೆಯಿಂದ ಆಗಮಿಸುತ್ತಿದ್ದ ಬೈಕ್ ಸವಾರರು ಮುಂಭಾಗದಿಂದ ವಾಹನ ಬರುವ ಕಾರಣಕ್ಕೆ ನಿಲ್ಲಿಸಿದ್ದಾರೆ. ಹಿಂದಿನಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ 112 ತುರ್ತುವಾಹನವನ್ನು ಚಲಾಯಿಸಿಕೊಂಡು ಬಂದು ಬೈಕ್ ಗೆ ಢಿಕ್ಕಿ ಹೊಡೆದಿದ್ದಾರೆ. ಇದರಿಂದ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. 112 ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

Leave a Reply

Your email address will not be published. Required fields are marked *

error: Content is protected !!