February 2, 2026

ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಲು ಸಂಬಳ ನೀಡಿ ಕರಡಿ ವೇಷ ಹಾಕಿಸಿದ ರೈತ

0
image_editor_output_image-1060014655-1648962436140.png

ತೆಲಂಗಾಣ: ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಲು ವ್ಯಕ್ತಿಯೊಬ್ಬನಿಗೆ ಸಂಬಳ ನೀಡಿ ಕರಡಿ ವೇಷ ಹಾಕಿಸಿ ತಮ್ಮ ಹೊಲದಲ್ಲಿ ನಿಲ್ಲಿಸಿ ಬೆಳೆ ರಕ್ಷಿಸುತ್ತಿರುವ ವಿಚಾರ ಸುದ್ದಿಯಾಗಿದೆ.

ತೆಲಂಗಾಣದ ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಕೋತಿಗಳು ಮತ್ತು ಕಾಡುಹಂದಿಗಳು ಬೆಳೆ ಹಾನಿ ಮಾಡುವುದನ್ನು ತಡೆಯಲು ಕರಡಿಯ ವೇಷ ಧರಿಸಿ ಹೊಲದಲ್ಲಿ ಓಡಾಡಲು ವ್ಯಕ್ತಿಯನ್ನು ನೇಮಿಸಿದ್ದಾರೆ.

ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಕರಡಿ ವೇಷ ಧರಿಸಿ ಓಡಾಡುವ ವ್ಯಕ್ತಿಗೆ ದಿನಕ್ಕೆ 500 ರೂ. ವೇತನವನ್ನೂ ನಿಗದಿ ಮಾಡಲಾಗಿದೆಯಂತೆ.

ಸದ್ಯ ಜಾಲತಾಣದಲ್ಲಿ ಈ ಸುದ್ದಿ ಹೆಚ್ಚು ಸುದ್ದಿಯಾಗುತ್ತಿದೆ. ಈ ಮಧ್ಯೆ ಕೆಲ ನೆಟ್ಟಿಗರು ಏನೇ ಆದರೂ ಪ್ರಾಣಿಗಳನ್ನು ನಿಯಂತ್ರಣಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿ ಕಮೆಂಟ್‌ ಮಾಡಿದರೆ, ಇನ್ನೂ ಕೆಲವರು ಕರಡಿ ವೇಷ ಹಾಕಿಕೊಳ್ಳಲು ತಿಂಗಳಿಗೆ 15,000 ರೂ. ಸಂಬಳವೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆದರೆ ಅವರ ಈ ಕರಡಿ ವೇಷದ ಉಪಾಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!