ಹಿರಿಯೂರು: ರಸ್ತೆ ಅಪಘಾತದಲ್ಲಿ ಓರ್ವ ಮೃತ್ಯು
ಹಿರಿಯೂರು(ಚಿತ್ರದುರ್ಗ): ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸಾವಿಗೀಡಾಗಿದ್ದಾರೆ.
ಮೃತರನ್ನು ಕವಿ ಅರಸನ್ ಎಂದು ಗುರುತಿಸಲಾಗಿದ್ದು ತಮಿಳು ನಾಡು ಮೂಲದವರಾಗಿದ್ದಾರೆ. ಕವಿ ಅರಸನ್ ಚಲಾಯಿಸುತ್ತಿದ್ದ ಟ್ರಕ್ ಹಿಂಬದಿಯಲ್ಲಿದ್ದ ಸ್ಟೇಷನರಿ ಲಾರಿಗೆ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.





