ಝುಬೇರ್ ಖಾನ್ ಕುಡ್ಲ ರಿಗೆ ರಾಜಾ ರವಿವರ್ಮ ಇಂಟರ್ ನ್ಯಾಷನಲ್ ಗೋಲ್ಡ್ ಅವಾರ್ಡ್
ಮಂಗಳೂರು: ಲಲಿತ ಕಲಾ ಕೇಂದ್ರ ಅಸ್ಸಾಂ ಇದರ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾ ಉತ್ಸವದಲ್ಲಿ ಮಂಗಳೂರಿನ ಕ್ರಿಯಾತ್ಮಕ ಕಲಾವಿದ ಝುಬೇರ್ ಖಾನ್ ಕುಡ್ಲ ರಿಗೆ “ರಾಜಾ ರವಿವರ್ಮ ಇಂಟರ್ ನ್ಯಾಷನಲ್ ಗೋಲ್ಡ್ ಅವಾರ್ಡ್” ನೀಡಿ ಗೌರವಿಸಿದೆ.


ದೇಶ ವಿದೇಶಗಳ ಸಾವಿರಕ್ಕಿಂತಲೂ ಹೆಚ್ಚು ಕಲಾವಿದರು ಭಾಗವಹಿಸಿರುವ ಈ ಕಲಾ ಉತ್ಸವದಲ್ಲಿ ಝುಬೇರ್ ಖಾನ್ ಕುಡ್ಲರ ‘ಬುದ್ಧ ಕಲಾ ಕೃತಿಗೆ’ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾ ಪ್ರದರ್ಶನ ಹಾಗೂ ಪ್ರಶಸ್ತಿಗಳನ್ನು ಪಡೆದಿರುವ ಝುಬೇರ್ ಖಾನ್ ಕುಡ್ಲ ರಿಗೆ ಇತ್ತೀಚೆಗೆ ಗ್ಲೋಬಲ್ ಫೀಸ್ ಯೂನಿವರ್ಸಿಟಿಯು ಇವರ ಕಲಾಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಮಾಜಿ ರಾಷ್ಟ್ರಪತಿ ಡಾ | ಎ.ಪಿ.ಜೆ. ಅಬ್ದುಲ್ ಕಲಾಂ ರಿಂದ ಇವರ ಕಲಾಕೃತಿಗೆ ಮೆಚ್ಚುಗೆ ಪತ್ರ ಪಡೆದಿರುವ ಇವರು ಪ್ರಸ್ತುತ ವಿಟ್ಲದ ಕಂಬಳಬೆಟ್ಟುವಿನಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಂಗ ಸ್ವರೂಪ(ರಿ) ತಂಡದ ಕಾರ್ಯದರ್ಶಿ ಯಾಗಿರುವ ಇವರು ಮಂಗಳೂರು ಮಹಾನಗರಪಾಲಿಕೆ ಮಾಜಿ ಉದ್ಯೋಗಿ ಶ್ರೀ ಆದಂ ಖಾನ್, ಫಾತಿಮಾ ದಂಪತಿಗಳ ಪುತ್ರ.





