ವಿಟ್ಲ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ: ಪೊಲೀಸ್ ಸಿಬ್ಬಂದಿ ಗಂಭೀರ
ವಿಟ್ಲ: ಬಸ್ಸು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡ ಘಟನೆ ಕೊಡಾಜೆ ಎಂಬಲ್ಲಿ ನಡೆದಿದೆ.
ಬೈಕ್‌ನಲ್ಲಿ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಧರ್ಣಪ್ಪ ಗೌಡ ಮತ್ತು ಅವರ ಮಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಧರ್ಣಪ್ಪ ಗೌಡ ಅವರು ಅನಂತಾಡಿ ನಿವಾಸಿಯಾಗಿದ್ದು, ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮನೆಯಿಂದ ಠಾಣೆಗೆ ತೆರಳುತ್ತಿದ್ದಾಗ ಮಾಣಿ ಕಡೆಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಧರ್ಣಪ್ಪ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.





