September 20, 2024

ಬಿಸಿ ರೋಡ್: ದ್ವಿಚಕ್ರ ವಾಹನದಲ್ಲಿ ದನದ ಮಾಂಸ ಸಾಗಾಟ: ಆರೋಪಿ ಬೋಳಂತೂರು ನಿವಾಸಿಯ ಬಂಧನ

0

ಬಂಟ್ವಾಳ: ದ್ವಿ ಚಕ್ರವಾಹನದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಆದಿತ್ಯವಾರ ಗೂಡಿನಬಳಿಯಲ್ಲಿ ನಡೆದಿದೆ.


ಬೋಳಂತೂರು ನಿವಾಸಿ ಮಹಮ್ಮದ್ ಮುಸ್ತಫಾ ಬಂಧಿತ ಆರೋಪಿ.
ಆರೋಪಿಯ ದ್ವಿ ಚಕ್ರವಾಹನ ಹಾಗೂ ಅದರಲ್ಲಿ ದ್ದ 20 ಕೆ.ಜಿ‌.ಮಾಂಸವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಆರೋಪಿ ಮಹಮ್ಮದ್ ಮುಸ್ತಫಾ ಹಾಗೂ ಸ್ನೇಹಿತ ಇಬ್ಬರು ಸೇರಿ ಅಕ್ರಮವಾಗಿ ದನಗಳನ್ನು ಕದ್ದು ತಂದು ಪ್ರತಿ ಆದಿತ್ಯವಾರ ದಿನ ಮನೆಯಲ್ಲಿ ಕಡಿದು ಮಾಂಸ ಮಾಡಿ ಬಳಿಕ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪೋಲೀಸರಿಗೆ ದೊರಕಿದೆ.
ಆರೋಪಿ ದ್ವಿ ಚಕ್ರದ ಮೂಲಕ ನಂದಾವರ, ಗೂಡಿನಬಳಿ, ಮಂಚಿ ಸಹಿತ ತಾಲೂಕಿನ ಆಯ್ದ ಕಡೆಗಳಿಗೆ ಮಾರಾಟ ಮಾಡುವುದಾಗಿ ಪೋಲೀಸರಿಗೆ ಮಾಹಿತಿ ದೊರಕಿದೆ.

Leave a Reply

Your email address will not be published. Required fields are marked *

error: Content is protected !!