August 21, 2026

ಅಪ್ರಾಪ್ತ ಬಾಲಕಿಯ ಸ್ನೇಹಿತನ ತಂದೆ ಹಾಗೂ ಸಹಚರರಿಂದ ಗ್ಯಾಂಗ್ ರೇಪ್: ಅತ್ಯಾಚಾರ ಬಳಿಕ ಕೊಲೆಗೈದು ಹೂತು ಹಾಕಿದ ಕಿರಾತಕರು

0
image_editor_output_image-993243271-1648375759579.jpg

ಬಿಹಾರ: ಅಪ್ರಾಪ್ತೆಯ ಮೇಲೆ ಆಕೆಯ ಸ್ನೇಹಿತನ ತಂದೆ ಹಾಗೂ ಸಹಚರರು ಗ್ಯಾಂಗ್ ರೇಪ್ ಮಾಡಿ ಕೊಲೆಗೈದು ಹೂತು ಹಾಕಿರುವ ಪೈಶಾಚಿಕ ಕೃತ್ಯವೊಂದು ಬಿಹಾರದ ಭೋಜ್ಪುರ್ನಲ್ಲಿ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಮಾರ್ಚ್ 12 ರಂದು ನಡೆದಿದೆ ಎನ್ನಲಾಗ್ತಿದೆ. ಆಕೆಯ ಪೋಷಕರು ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಹೂತು ಹಾಕಿರುವುದನ್ನು ಪತ್ತೆ ಮಾಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಕೆಯ ಸ್ನೇಹಿತನ ತಂದೆಯೇ ತನ್ನ ಸಹಚರರೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದ. ಆ ಬಳಿಕ ಕೃತ್ಯ ಬಯಲಾಗುತ್ತದೆ ಎಂದು ಆಕೆಯನ್ನು ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಪೋಷಕರಿಂದ ಆಕೆಯ ನಾಪತ್ತೆ ಪ್ರಕರಣ ದಾಖಲಾದ ಬಳಿಕ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!