March 19, 2026

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಅಂಗಡಿಗೆ ಢಿಕ್ಕಿ, ಓರ್ವ ಮೃತ್ಯು, ಇಬ್ಬರು ಗಂಭೀರ

0
image_editor_output_image1890663143-1648110447766.jpg

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಅಂಗಡಿ ವರಾಂಡದಲ್ಲಿ ವಿಶ್ರಮಿಸುತ್ತಿದ್ದವರ ಮೇಲೆ ಹರಿದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ಬೇಕಲ ಠಾಣಾ ವ್ಯಾಪ್ತಿಯ ಕೋಟಿಕುಳದಲ್ಲಿ ನಡೆದಿದೆ.

ವಿಷ್ಣು ಪ್ರಸಾದ್ (20) ಮೃತಪಟ್ಟವರು.ನಿತಿನ್ ಮತ್ತು ಶ್ರೀಲಾಲ್ ಅಪಾಯದಿಂದ ಪಾರಾಗಿದ್ದಾರೆ.

ಸಮೀಪದ ತರವಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅಂಗಡಿ ವರಾಂಡದಲ್ಲಿ ಮೂವರು ವಿಶ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಅತೀ ವೇಗದಿಂದ ಬಂದ ಕಾರು ಅಂಗಡಿ ವರಾಂಡಕ್ಕೆ ನುಗ್ಗಿ ಈ ದುರ್ಘಟನೆ ನಡೆದಿದೆ. ಶ್ರೀಲಾಲ್ ರನ್ನು ಮಂಗಳೂರು ಹಾಗೂ ನಿತಿನ್ ರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!