March 21, 2026

ಕಾರ್ಕಳ: ಬಸ್‌ನಿಂದ ಇಳಿಯುತ್ತಿದ್ದಾಗ ಕೆಳಕ್ಕೆ ಬಿದ್ದು ಮಹಿಳೆಗೆ ಗಾಯ

0
xsuicide-1561001192-jpg-pagespeed-ic-ezqijkfwff-1583060607-1604151654-1610986150.jpg

ಕಾರ್ಕಳ: ಮಹಿಳೆಯೊಬ್ಬರು ಬಸ್‌ನಿಂದ ಇಳಿಯುತ್ತಿದ್ದಾಗ ಕೆಳಕ್ಕೆ ಬಿದ್ದು ಮಹಿಳೆಯೊಬ್ಬಳು ಗಾಯಗೊಂಡ ಘಟನೆ ಕುಕ್ಕುಂದೂರಿನ ತ್ರಿವಿಕ್ರಮ ಕಿಣಿ ಎಂಬವರ ಅಂಗಡಿ ಬಳಿ ನಡೆದಿದೆ. ರೇಣುಕಾ ಭೀಮಪ್ಪ ರಾಥೋಡ್(40)ಘಟನೆಯಲ್ಲಿ ಗಾಯಗೊಂಡ ಮಹಿಳೆ.

ಮಾ.20 ರಂದು ಬೈಲೂರಿನಿಂದ ಕಾರ್ಕಳಕ್ಕೆ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದ ಅವರು ಕುಕ್ಕುಂದೂರು ತ್ರಿವಿಕ್ರಮ ಕಿಣಿ ಅಂಗಡಿ ಬಳಿಯಲ್ಲಿ ಬಸ್ಸಿನಿನಿಂದ ಇಳಿಯುತ್ತಿದ್ದರು. ಅದೇ ವೇಳೆಗೆ ಸೂಚನೆ ಸಿಗದೇ ಏಕಾಏಕಿ ಚಾಲಕ ಬಸ್ಸನ್ನು ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ.

ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!