February 4, 2026

ಪಾವಗಡದಲ್ಲಿ ಖಾಸಗಿ ಬಸ್ ಗಳ ಪರವಾನಿಗೆ ರದ್ದು: ಸಾರಿಗೆ ಸಚಿವ ಬಿ.ಶ್ರೀರಾಮುಲು

0
Screenshot_2022-03-19-14-01-05-07_680d03679600f7af0b4c700c6b270fe7.jpg

ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಎಂಟು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾವಗಡದಲ್ಲಿ ಖಾಸಗಿ ಬಸ್ ಗಳ ಪರವಾನಗಿ ರದ್ದು ಮಾಡಲು ಸೂಚನೆ ನೀಡಿದ್ದೇನೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾವಗಡದಲ್ಲಿ ಖಾಸಗಿ ಬಸ್ ಗಳ ಪರವಾನಗಿಯನ್ನ ರದ್ದು ಮಾಡಲು ಸೂಚನೆ ನೀಡಿದ್ದು, ಇಲ್ಲಿ ಸಾರಿಗೆ ಬಸ್ ಓಡಿಸಲು ಕ್ರಮ ಕೈಗೊಳ್ಳುತ್ತೇವೆ. ಆರ್​​ಟಿಒ ಸಿಬ್ಬಂದಿ ವಿರುದ್ಧ ಕ್ರಮ‌ ಕೈಗೊಂಡು ಅಮಾನತು ಮಾಡುತ್ತೇವೆ ಎಂದರು.

ಇನ್ನು ಇಂದು ನಡೆದ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಕೊಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!