March 23, 2026

ವಿಟ್ಲ: ಅಡಿಕೆ ಕಳ್ಳತನ ಪ್ರಕರಣ:
ವಾಹನ ಮತ್ತು ಅಡಿಕೆ ವಶಪಡಿಸಿಕೊಂಡ ವಿಟ್ಲ ಪೊಲೀಸರು

0
IMG-20220316-WA0014.jpg

ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನೀರಪಳಿಕೆ ಬಾರೆಬೆಟ್ಟು ಎಂಬಲಿ ಮಹಮ್ಮದ್ ಮುಸ್ತಾಫ್ ಎಂಬವರ ಮನೆಯ ಅಂಗಳದಲ್ಲಿ ಒಣ ಹಾಕಿದ ಅಡಿಕೆಯನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಿನಾಂಕ : 06-02 2022 ರಿಂದ ದಿನಾಂಕ : 07-02-2022 ರ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಸುಮಾರು 3500 ಅಡಿಕೆಯನ್ನು ಕಳ್ಳತನ ಮಾಡಿದ ಬಗ್ಗೆ ದೂರು ದಾಖಲಾಗಿರುತ್ತದೆ .

ಪ್ರಕರಣ ದಾಖಅಸಿಕೊಂಡು ತನಿಖೆ ನಡೆಸಿದಾಗ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಗಾಣದಬೆಟ್ಟು ಎಂಬಲ್ಲಿಯ 4 ಜನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಈ ಕೃತ್ಯವನ್ನು ಎಸಗಿರುವುದಾಗಿದೆ . ಇವರಿಂದ ಕಳ್ಳತನವಾದ ಸುಮಾರು 3500 ಅಡಿಕೆ ಹಾಗೂ ಪ್ರಕರಣದಲ್ಲಿ ಶಾಮೀಲಾದ 2 ಮೋಟಾರು ಸೈಕಲ್ ಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!