ಫಾಲ್ಸ್ ಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು
ಬೆಂಗಳೂರು: ಕನಕಪುರ ತಾಲೂಕಿನ ಪ್ರವಾಸಿ ತಾಣ ಚುಂಚಿ ಫಾಲ್ಸ್ಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಉತ್ತರಕಾಂಡ ಮೂಲದ ವಿದ್ಯಾರ್ಥಿ ಅಂಬರ್ ಗಂಗೊಲ ಮೃತ ವಿದ್ಯಾರ್ಥಿ. ಸರ್ಜಾಪುರದ ಖಾಸಗಿ ವಿವಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ, ಆತನ ತಂದೆಯೂ ಅದೇ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು.
ಐದು ಜನ ಸ್ನೇಹಿತರೊಂದಿಗೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಚುಂಚಿ ಫಾಲ್ಸ್ ಗೆ ಬೆಳಗ್ಗೆ 7 ಗಂಟೆ ಸಮಯಕ್ಕೆ ಬಂದಿದ್ದರು, ಅಂಬರ್ ಗಂಗೊಳ ಈಜಲು ನೀರಿಗಿಳಿದಿದ್ದ, 2-3 ಸುತ್ತು ಈಜಿದ ನಂತರ ಗಂಗೋಳ ದಣಿದು ಮುಳುಗಲು ಪ್ರಾರಂಭಿಸಿ. ಈ ವೇಳೆ ಆತನ ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಕೂಡಲೇ ಆತನ ಸ್ನೇಹಿತರು ಸ್ಖಳೀಯ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ತಡವಾಗಿತ್ತು. ವಿದ್ಯಾರ್ಥಿ ಶವಕ್ಕಾಗಿಸಾತನೂರು ಪೊಲೀಸರು ಶೋಧ ಕಾರ್ಯ ಆರಂಭಿಸಿ ಶವ ಹೊರಕ್ಕೆ ತೆಗೆದಿದ್ದಾರೆ.




