ಬಂಟ್ವಾಳ: ಶಾಲಾ ಬಸ್ ಡಿಕ್ಕಿ ಹೊಡೆದು ಮೆಸ್ಕಾಂ ಮೀಟರ್ ರೀಡರ್ ಮೃತ್ಯು
ಬಂಟ್ವಾಳ: ಶಾಲಾ ಬಸ್ ಡಿಕ್ಕಿಯಾಗಿ ಮೆಸ್ಕಾಂ ಉದ್ಯೋಗಿಯೋರ್ವ ಮೃತಪಟ್ಟ ಘಟನೆ ಕುದ್ಕೋಳಿ ಎಂಬಲ್ಲಿ ನಡೆದಿದೆ.
ಮೂಡಬಿದ್ರೆ ಮೂರುಮಾರ್ನಾಡು ನಿವಾಸಿ ಗಣೇಶ್ ಪೂಜಾರಿ ಮೃತಪಟ್ಟ ಯುವಕ.
ಮೆಸ್ಕಾಂ ನಲ್ಲಿ ಮೀಟರ್ ರೀಡಿಂಗ್ ಉದ್ಯೊಗಿಯಾಗಿದ್ದು, ಬಂಟ್ವಾಳದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಮನೆಗೆ ಹೋಗುವ ಸಂದರ್ಭದಲ್ಲಿ ಕುದ್ಕೋಳಿ ಎಂಬಲ್ಲಿ ಎದುರಿನಿಂದ ಬಂದ ಶಾಲಾ ಬಸ್ ಬೈಕ್ ಗೆ ಡಿಕ್ಕಿಯಾಗಿ ಗಂಭೀರ ಸ್ವರೂಪದ ಗಾಯಗೊಂಡ ಗಣೇಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪುಂಜಾಲಕಟ್ಟೆ ಠಾಣಾ ಎಸ್ಮೈ.ಕುಟ್ಟಿ ಎಂ.ಕೆ ಅವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




