ವಿಟ್ಲ: ಗೆಲುವಿನ ನಗೆಯಲ್ಲೂ ಮಾನವೀಯತೆ ಮೆರೆದ VPL ವಿನ್ನರ್ಸ್ ..!
ವಿಟ್ಲ: ಅದ್ದೂರಿಯಾಗಿ ತೆರೆಕಂಡ ವಿಟ್ಲ ಪ್ರೀಮಿಯರ್ ಲೀಗ್ ಪಂದ್ಯಾಕೂಟದಲ್ಲಿ ವಿಜೇತ ತಂಡವಾಗಿ ಹೊರ ಹೊಮ್ಮಿದ ಬಶೀರ್ ಮಾಲಕತ್ವದ ಫಿದಾ ಸ್ಟಾರ್ಸ್ ತಂಡ ರೂ 5,000/- ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿರುವ ಡಿ ಗ್ರೂಪ್ ವಿಟ್ಲ ಸಂಸ್ಥೆಯ ಆಂಬ್ಯುಲೆನ್ಸ್ ನಿಧಿಗೆ ನೆರವು ನೀಡುವ ಮೂಲಕ ಕ್ರೀಡೆಯ ಜೊತೆ ಸಾಮಾಜಿಕ ಕಳಕಳಿಯ ಚಿಂತನೆಯನ್ನು ಮೈಗೂಡಿಸಿ ಮಾದರಿಯಾದರು.

ಫೈನಲ್ ಪ್ರವೇಶಿಸಿದ ಫಿದಾ ಸ್ಟಾರ್ಸ್ ಹಾಗೂ ಅಲ್ ಶಝಾನ ಈ ಎರಡೂ ತಂಡಗಳು ತಮ್ಮ ತಂಡ ಫೈನಲ್ ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರೆ ತಮ್ಮ ಸಣ್ಣ ನೆರವು ಡಿ ಗ್ರೂಪ್ ಆಂಬ್ಯುಲೆನ್ಸ್ ಗೆ ನೀಡುವುದಾಗಿ ವಾಗ್ದಾನ ಮಾಡಿದ್ದರು.




