May 17, 2026

ವಿಮೆನ್ ಇಂಡಿಯಾ ಮೂಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ

0
IMG_20220301_130331.jpg

ಬೆಳ್ತಂಗಡಿ: ವಿಮೆನ್ ಇಂಡಿಯಾ ಮೂಮೆಂಟ್ ರಾಷ್ಟ್ರಾದ್ಯಂತ ಮಹಿಳೆಯರ ಹಕ್ಕುಗಳ ಬಗ್ಗೆ ಹೋರಾಟ,ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯಾಗಿ ಕಾರ್ಯಾಚರಿಸುತ್ತಿದೆ. ಇದರ ಭಾಗವಾಗಿ ವಿಮೆನ್ ಇಂಡಿಯಾ ಮೂಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿಯ ರಚನೆಯಾಗಿದೆ. ಅಧ್ಯಕ್ಷರಾಗಿ ಪಬ್ಸಿರಾ, ಉಪಾಧ್ಯಕ್ಷೆಯಾಗಿ ಡೆನ್ಸಿ ರೋಡ್ರಿಗಸ್, ಕಾರ್ಯದರ್ಶಿಯಾಗಿ ಸುಹೈರಿಯಾ, ಜೊತೆ ಕಾರ್ಯದರ್ಶಿಯಾಗಿ ಅಮಿನಾ, ಕೋಶಾಧಿಕಾರಿಯಾಗಿ ಪಾರ್ವತಿ ಆಯ್ಕೆಯಾಗಿರುತ್ತಾರೆ.

ಹಾಗೂ ಸಮಿತಿ ಸದಸ್ಯರಾಗಿ ಸಾರಾ ಕಟ್ಟೆ, ಮಸೂದ ಕುಂಟಿನಿ,ರಝಿಯಾ ಬಳ್ಳಮಂಜ, ಮರಿಯಮ್ಮ ನೇಮಕಗೊಂಡಿರುತ್ತಾರೆ.
ಕ್ಷೇತ್ರ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ವಿಮೆನ್ ಇಂಡಿಯಾ ಮೂಮೆಂಟ್ ದ.ಕ ಜಿಲ್ಲಾ ಸಮಿತಿ ಸದಸ್ಯೆ ಮರಿಯಮ್ಮ ಟಿ‌.ಎಸ್ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!