ಉಪ್ಪಿನಂಗಡಿ: ಕೆಂಪು ಕಲ್ಲು ಮೈಮೇಲೆ ಬಿದ್ದು ಮೂರು ವರ್ಷದ ಮಗು ಮೃತ್ಯು
ಉಪ್ಪಿನಂಗಡಿ: ಕೆಂಪು ಕಲ್ಲು ಕುಸಿದು ಮೂರು ವರ್ಷದ ಮಗುವಿನ ಮೈಮೇಲೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟಿ ಎಂಬಲ್ಲಿ ನಡೆದಿದೆ.
ಕುಪ್ಪೆಟಿ ನಿವಾಸಿ ಅಶ್ರಪ್ ಅವರ ಪುತ್ರ ಮೂರು ವರ್ಷದ ಮಹಮ್ಮದ್ ನೌಷೀರ್ ಮೃತಪಟ್ಟ ಮಗು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮನೆ ಹೊರಗಡೆ ಆಟ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಶ್ರಪ್ ಅವರ ಮನೆಯ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಕಲ್ಲು ತಂದು ಇಡಲಾಗಿತ್ತು. ಆಕಸ್ಮಿಕವಾಗಿ ಕಲ್ಲು ಜಾರಿ ಮಗವಿನ ಮೇಲೆ ಬಿದ್ದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮೃತಪಟ್ಟಿದೆ.