December 15, 2025

ರಷ್ಯಾ ಉತ್ಪಾದಿತ ಮದ್ಯವನ್ನು ನಿರ್ಬಂಧಿಸಿದ ಅಮೆರಿಕ, ಕೆನಡಾ

0
image_editor_output_image1369244861-1646031895770.jpg

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಸೇನೆ ಆಕ್ರಮಣ ಮುಂದುವರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಮತ್ತು ಕೆನಡಾ, ರಷ್ಯಾ ಉತ್ಪಾದಿತ ಮದ್ಯ ಮಾರಾಟವನ್ನು ನಿರ್ಬಂಧಿಸಿವೆ.

ಸರ್ಕಾರದ ವೈನ್‌ ಮತ್ತು ಮದ್ಯ ಮಾರಾಟ ಕೇಂದ್ರಗಳಲ್ಲಿ ರಷ್ಯನ್‌ ಬ್ರ್ಯಾಂಡ್‌ನ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ ರಾಜ್ಯದ ಗವರ್ನರ್ ಕ್ರಿಸ್ ಸುನುನು ಘೊಷಿಸಿದ್ದಾರೆ. ಒಹಿಯೊ ರಾಜ್ಯದಲ್ಲಿಯೂ ಇದೇ ರೀತಿಯ ಆದೇಶ ಹೊರಡಿಸಲಾಗಿದೆ.

ಕೆನಡಾದ ಮನಿಟೊಬ, ನ್ಯೂಫೌಂಡ್‌ಲ್ಯಾಂಡ್, ಒಂಟಾರಿಯೊ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿನ ಮದ್ಯ ಮಾರಾಟ ಮಳಿಗೆಗಳಿಂದ ರಷ್ಯನ್ ಬ್ಯಾಂಡ್‌ನ ಮದ್ಯ ಮತ್ತು ಇತರ ಪಾನೀಯಗಳನ್ನು ತೆರವುಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!