February 1, 2026

ರಷ್ಯಾ ಆಕ್ರಮಣ: 14 ಮಕ್ಕಳು ಸೇರಿ 352 ಉಕ್ರೇನ್ ನಾಗರಿಕರು ಮೃತ್ಯು

0
image_editor_output_image230891366-1646024126374.jpg

ಕೀವ್: ರಷ್ಯಾ ನಡೆಸುತ್ತಿರುವ ಆಕ್ರಮಣದಿಂದಾಗಿ ದೇಶದಲ್ಲಿ 14 ಮಕ್ಕಳು ಸೇರಿದಂತೆ ಒಟ್ಟು 352 ನಾಗರಿಕರು ಇದುವರೆಗೆ ಮೃತಪಟ್ಟಿದ್ದಾರೆ. 116 ಮಕ್ಕಳು ಮತ್ತು 1,684 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ.

ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಸಂಘರ್ಷದಿಂದಾಗಿ ಉಕ್ರೇನ್ ಸೇನೆಯಲ್ಲಿ ಸಂಭವಿಸಿರುವ ಸಾವುನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಆಕ್ರಮಣದ ವಿಚಾರವಾಗಿ ಭಾನುವಾರ ಹೇಳಿಕೆ ನೀಡಿರುವ ರಷ್ಯಾ, ಉಕ್ರೇನ್‌ ಸೇನೆಯನ್ನು ಗುರಿಯಾಗಿಸಿ ಮಾತ್ರವೇ ದಾಳಿ ನಡೆಸುತ್ತಿರುವುದಾಗಿ ಮತ್ತು ಅಲ್ಲಿನ (ಉಕ್ರೇನ್‌) ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ. ಜೊತೆಗೆ, ತನ್ನ ಸೇನಾಪಡೆಯ ಯೋಧರೂ ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಆದರೆ, ರಷ್ಯಾ ರಕ್ಷಣಾ ಸಚಿವಾಲಯ ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!