ಉಪ್ಪಿನಂಗಡಿ: ಭೀಕರ ಬೈಕ್ ಅಪಘಾತ: ಬೆದ್ರೋಡಿಯ ಯುವಕ ಮೃತ್ಯು
ಉಪ್ಪಿನಂಗಡಿ: ಸಮೀಪದ ನೆಕ್ಕಿಲಾಡಿ ಎಂಬಲ್ಲಿ ಬೈಕ್ ಸವಾರರು ಮೃತಪಟ್ಟ ಘಟನೆ ನಡೆದಿದೆ .
ಮೃತ ವ್ಯಕ್ತಿಯನ್ನು ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ ಗಾರೆ ಕೆಲಸಗಾರ ನವಾಜ್ ಎಂದು ಗುರುತಿಸಲಾಗಿದೆ.
ಕೆಲಸದ ನಿಮಿತ್ತ ನೆಕ್ಕಿಲಾಡಿ ಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬೈಕ್ ಏರಿ ಒಡೆದ ಪರಿಣಾಮ ಅದರಲ್ಲಿದ್ದ ಬೈಕ್ ಸವಾರ ಮೃತಪಟ್ಟು ಹಿಂಬದಿ ಸವಾರ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.
ಮಂಗಳೂರಿನಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಅಶ್ವಿನಿ ಆಂಬ್ಯುಲೆನ್ಸ್ ಚಾಲಕ ಅಪಘಾತ ನಡೆದ ಸ್ಥಳದಲ್ಲಿ ತಕ್ಷಣ ಗಾಯಗೊಂಡಿದ್ದವರನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದರು
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ .





