September 20, 2024

ಧರ್ಮಸ್ಥಳ: ದಲಿತ ಯುವಕನ ಹತ್ಯೆ ಪ್ರಕರಣ: ಆರೋಪಿ ಬಜರಂಗದಳದ ಮುಖಂಡ ಪೊಲೀಸ್ ವಶಕ್ಕೆ

0

ಧರ್ಮಸ್ಥಳ: ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ದಲಿತ ಸಮುದಾಯದ ಕನ್ಯಾಡಿಯ ಕೂಲಿ ಕಾರ್ಮಿಕ ದಿನೇಶ್ ನಾಯ್ಕ್‌ ಎಂಬವರ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಕನ್ಯಾಡಿಯ ಕಿಟ್ಟ ಯಾನೆ ಕೃಷ್ಣ ರನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ

ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್‌ ರವರು ಫೆ 25ರ ನಸುಕಿನ ವೇಳೆ ಮೃತಪಟ್ಟಿದ್ದರು. ಇವರಿಗೆ ಫೆ 23 ರಂದು ಬೆಳಿಗ್ಗೆ ರಾಮ ಮಂದಿರದ ಮುಂಭಾಗದಲ್ಲಿ ಅಂಗಡಿಯೊಂದರ ಬಳಿ ಆರೋಪಿ ಕಿಟ್ಟ ಯಾನೆ ಕೃಷ್ಣ ಹಲ್ಲೆ ನಡೆಸಿದ್ದಾನೆಂದು ಆರೋಪ ವ್ಯಕ್ತವಾಗಿತ್ತು. ದೇಹದ ಅಯಕಟ್ಟಿನ ಜಾಗಕ್ಕೆ ಕೈಯಿಂದ ಬಡಿದು ಕಾಲಿನಿಂದ ಬಡಿದು ತೀವ್ರ ಗಾಯಗೊಳಿಸಿದರಿಂದ ದಿನೇಶ್‌ ಅಸ್ವಸ್ಥಗೊಂಡಿದ್ದರು .

ಹೀಗಾಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ದಿನೇಶ್‌ ತಾಯಿ ಪಧ್ಮಾವತಿಯವರು ಠಾಣೆಗೆ ದೂರು ನೀಡಿದ್ದರು. ಆರೋಪಿ ಕೃಷ್ಣ ನು ದಿನೇಶ್‌ ಮೇಲೆ ಹಾಡುಹಗಲೇ ಹಲ್ಲೆ ನಡೆಸಿ ಥಳಿಸುತ್ತಿದ್ದಾರೆ ಎನ್ನಲಾದ ಸಿಸಿಟಿವಿ ವಿಡಿಯೋ ವೊಂದು ವೈರಲ್‌ ಆಗಿದೆ. ಕ್ಷುಲ್ಲಕ ಕಾರಣವೊಂದಕ್ಕೆ ಈ ಹತ್ಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ಕೃಷ್ಣನು ಬಜರಂಗದಳ ಪುತ್ತೂರು ಜಿಲ್ಲಾ ಪ್ರಖಂಡದ ಕಾರ್ಯಧ್ಯಕ್ಷ ಭಾಸ್ಕರ ಧರ್ಮಸ್ಥಳರವರ ಸಹೋದರ. ಇವರು ಕೂಡ ಹಿಂದೂ ಪರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ̤ ಕೃಷ್ಣ ತನ್ನ ವಿರುದ್ದ ಕೊಲೆ ಪ್ರಕರಣ ದಾಖಲಾಗುತ್ತಲೇ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯ ಅಡಗುತಾಣವನ್ನು ಶೋಧಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!