ಕುಡಿಯಲು ಹಣ ನೀಡದ ವೃದ್ಧ ತಾಯಿಯನ್ನೇ ಕೊಲೆಗೈದ ಮಗ
ಬೆಂಗಳೂರು: ಬೆಂಗಳೂರಿನ ಮಾರತ್ತಹಳ್ಳಿಯ ದೇವರಬಿಸನಹಳ್ಳಿಯಲ್ಲಿ ಮದ್ಯದ ದಾಸನಾಗಿದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದಿರುವ ಘಟನೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಯಮುನಮ್ಮ(70) ಎಂದು ಗುರುತಿಸಲಾಗಿದೆ.
ಕುಡಿಯಲು ಹಣ ನೀಡುವಂತೆ ವೃದ್ಧ ತಾಯಿಯನ್ನು ಮಗ ಅಂಬರೀಶ್ ಪೀಡಿಸುತ್ತಿದ್ದು, ಇದೇ ಕಾರಣಕ್ಕೆ ತಾಯಿ-ಮಗನ ನಡುವೆ ಜಗಳವಾಗಿದೆ.
ಇನ್ನು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಗ ಅಂಬರೀಶ್, ತಾಯಿಯ ಕೆನ್ನೆಗೆ ಬಾರಿಸಿದ್ದಾನೆ. ಗಂಭೀರವಾಗಿ ಏಟು ಬಿದ್ದ ಪರಿಣಾಮ ತಾಯಿ ಕುಸಿದು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.