ಬಂಟ್ವಾಳ: ಕಪ್ಪು ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕ ಸಹಿತ ಇಬ್ಬರು ಮೃತ್ಯು: ಅಕ್ರಮ ಕೋರೆ ವಿರುದ್ಧ ಜನಾಕ್ರೋಶ

ಬಂಟ್ವಾಳ: ಕಪ್ಪು ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕ ಸೇರಿದಂತೆ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ನರಿಕೊಂಬು ಎಂಬಲ್ಲಿ ನಡೆದಿದೆ.
ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಬೋರುಗುಡ್ಡೆ ನಿವಾಸಿ ಜಗದೀಶ್ (39) ಹಾಗೂ ಬಾಲಕ ನಿಧೀಶ್ (16)
ಎಂಬವರು ಮೃತಪಟ್ಟ ದುರ್ದೈವಿಗಳು.
ಅಲ್ಲಿಪಾದೆ ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ನಿಧೀಶ್ ಅಕ್ಕನ ಮನೆ ನರಿಕೊಂಬು ವಿಗೆ ಬಂದಿದ್ದ. ಅಲ್ಲಿಂದ ಜಗದೀಶ್ ಅವರ ಜೊತೆ ಕೋರೆ ಗೆ ಹೋಗಿದ್ದ ಎಂದು ಹೇಳಲಾಗುತ್ತಿದೆ.
ನರಿಕೊಂಬು ಗ್ರಾಮದಲ್ಲಿ ಅಕ್ರಮವಾಗಿ ಕಪ್ಪು ಕಲ್ಲಿನ ಕೋರೆ ಕಾರ್ಯ ಚರಿಸುವುದಲ್ಲದೆ ಸ್ಥಳೀಯ ಮನೆಗೆ ಹಾನಿಯಾಗುತ್ತದೆ ಎಂದು ಪ್ರತಿಭಟನೆಗಳು ಕೂಡ ನಡೆದಿತ್ತು.
ಆದರೆ ಕೋರೆ ಪ್ರತಿಭಟನೆಗೆ ಜಗ್ಗದೆ ಸಲೀಸಲಾಗಿ ಕಾರ್ಯಚರಿಸುತ್ತಿದ್ದು, ಅದೇ ಕೋರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಸ್ಥಳಕ್ಕೆ ಬೇಟಿ ನೀಡದೆ ಶವವನ್ನು ಕದಲಿಸಲು ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡದ ಸಾರ್ವಜನಿಕ ರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಅನಧಿಕೃತ ಕೋರೆ ಎಂದು ನಾವು ಪ್ರತಿಭಟನೆ ನಡೆಸಿದರೂ ಇಲಾಖೆ ಮೌನವಾಗಿದ್ದ ಪರಿಣಾಮವಾಗಿ ಇಂತಹ ದುರ್ಘಟನೆ ಗೆ ಕಾರಣವಾಗಿದೆ ಎಂದು ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರ ಆಕ್ರೋಶ ಭರಿತ ಮಾತುಗಳು
ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.