ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಮೌಲಾನಾ ಶಾಫಿ ಸಅದಿ
ಮಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ವಕ್ಫ್ ವಿವಾದ, ಹಿಜಾಬ್ ವಿವಾದ ಬಂದಾಗ ಮಾತಾಡಿದ್ದೇ ವಕ್ಫ್ ಮಂಡಳಿ. ಅಲ್ಲದೇ ನಾನು ಶಾಸಕ ರಘುಪತಿ ಭಟ್ ಜೊತೆಗೆ ಮಾತಾನಾಡಿದ್ದೇನೆ, ಆರು ಮಂದಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ ಅವಕಾಶ ಕೊಡಿ ಎಂದು ನಾನೇ ಪ್ರಾಂಶುಪಾಲರಿಗೆ ಹೇಳಿದ್ದೆ. ಅಲ್ಲದೇ ಹೆಣ್ಮಕ್ಕಳಿಗೆ ನಾನು ಬುದ್ದಿಮಾತು ಹೇಳಿದ್ದೆ ಎಂದರು.
ವಿದ್ಯಾಸಂಸ್ಥೆಗಳಲ್ಲಿ ಕೋಮುವಾದದ ಬಣ್ಣ ಕಾಣಿಸಿಕೊಂಡಿರುವುದು ದುರಂತ. ಸಾಮಾಜಿಕ ಶಾಂತಿ ಕದಡುವ ಶಕ್ತಿಗಳಿಗೆ ಶಿಕ್ಷೆ ನೀಡಬೇಕಾಗಿದೆ. ಇನ್ನೂ ಈ ವಿವಾದದ ಕುರಿತು ಶಿಕ್ಷಣ ಸಚಿವರ ಜೊತೆಗೆ ಮಾತಾಡಿದ್ದೀನಿ. ಇದೊಂದು ಶರೀಯತ್ತ್ ವ್ಯವಸ್ಥೆ ಆಗಿದೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ನಾನು ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಹೇಳಿದ್ದೆ. ಆ ಹಕ್ಕನ್ನು ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೀನಿ ಎಂದ ಹೇಳಿದರು.
ನಾನು ವಕ್ಫ್ ಅಧ್ಯಕ್ಷನ ವ್ಯಾಪ್ತಿಯಲ್ಲಿ ಬರುವ ಅಧಿಕಾರವನ್ನು ಉಪಯೋಗಿಸಿಕೊಂಡು ಈ ವಿವಾದ ತಣಿಸಲು ಪ್ರಯತ್ನ ಮಾಡಿದ್ದೀನಿ. ಕೆಲವರು ನನ್ನ ಈ ಹಿಂದಿನ ಹೇಳಿಕೆಯನ್ನು ತಿರುಚಿ ವೈರಲ್ ಮಾಡ್ತಿದ್ದಾರೆ. ಅದಕ್ಕೆ ನಾನು ಉತ್ತರ ಕೊಡುತ್ತಾ ಕೂತರೆ ವಕ್ಫ್ ಕೆಲಸವನ್ನು ನನಗೆ ಮಾಡಲು ಆಗಲ್ಲ. ಸಾಮರಸ್ಯಕ್ಕೆ ಧಕ್ಕೆ ತರಲು ಕೆಲವರು ಪ್ರಯತ್ನ ಮಾಡ್ತಿದ್ದಾರೆ. ವಕ್ಫ್ ಆಸ್ತಿಯನ್ನು ಯಾರೇ ಕಬಳಿಕೆ ಮಾಡಲಿ, ಅಂತಹವರ ವಿರುದ್ಧ ನಾವು ಕಾನೂನು ಅಸ್ತ್ರ ಪ್ರಯೋಗ ಮಾಡಲಿದ್ದೀವಿ ಎಂದು ಎಚ್ಚರಿಕೆ ನೀಡಿದರು. ವಕ್ಫ್ ಆಸ್ತಿ ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೆ ಸಿಗಬೇಕಾದ್ದು ಎಂದರು.




