ವೆಸ್ಟ್ ಇಂಡೀಸ್ ವಿರುದ್ಧ ಟ್ವೆಂಟಿ–20 ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯ
ನವದೆಹಲಿ: ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 10 ದಿನಗಳ ವಿಶ್ರಾಂತಿ ನೀಡಿದೆ.
ಕೊಹ್ಲಿ ಅವರು ಬಯೋಬಬಲ್ ತೊರೆದಿದ್ದು, ಮನೆಗೆ ಮರಳಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಕೋಲ್ಕತ್ತದಲ್ಲಿ ನಡೆಯಲಿರುವ ಕೊನೆಯ ಟ್ವೆಂಟಿ–20 ಪಂದ್ಯಕ್ಕೆ ಲಭ್ಯರಿರುವುದಿಲ್ಲ.
ಶ್ರೀಲಂಕಾ ವಿರುದ್ಧ ಫೆಬ್ರುವರಿ 24ರಂದು ಲಖನೌದಲ್ಲಿ ಆರಂಭವಾಗಲಿರುವ ಟ್ವೆಂಟಿ–20 ಸರಣಿಯಲ್ಲಿಯೂ ಕೊಹ್ಲಿ ತಂಡಕ್ಕೆ ಲಭ್ಯರಿರುವುದಿಲ್ಲ. ಶ್ರೀಲಂಕಾ ವಿರುದ್ಧದ ಸರಣಿಯ ಎರಡು ಪಂದ್ಯಗಳು ಧರ್ಮಶಾಲಾದಲ್ಲಿ ಫೆಬ್ರುವರಿ 26 ಹಾಗೂ 27ರಂದು ನಡೆಯಲಿವೆ.




