February 2, 2026

ಯುವತಿಯ ಅರೆ ಬೆತ್ತಲೆ ಮೃತದೇಹ ಪತ್ತೆ

0
Screenshot_2022-02-19-12-25-07-72_680d03679600f7af0b4c700c6b270fe7.jpg

ನವದೆಹಲಿ: ಯುವತಿಯ ಕತ್ತು ಹಿಸುಕಿ ಕೊಲೆ ಮಾಡಲಾದ ಅರೆ ಬೆತ್ತಲೆ ಶವ ದೆಹಲಿಯ ಬುರಾರಿ ಪ್ರದೇಶದಲ್ಲಿ ಶುಕ್ರವಾರ ಪತ್ತೆಯಾಗಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬುರಾರಿಯ ಕೌಶಿಕ್ ಎನ್ ಕ್ಲೇವ್ ಪ್ರದೇಶದಲ್ಲಿ ನಡೆದ ಈ ಘಟನೆಯ ಆರೋಪಿಯನ್ನು ಅಮಾನ್ ಎಂದು ಗುರುತಿಸಲಾಗಿದ್ದು, ಈತ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ವಿವರ ನೀಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತನ್ನ ಸಂಬಂಧಿಯನ್ನು ಭೇಟಿಯಾಗುವುದಾಗಿ ಆರೋಪಿಯ ಪತ್ನಿ ಮನೆಯಿಂದ ಹೊರ ಹೋದ ಮೇಲೆ, ಅಮಾನ್ ಈ ಯುವತಿಯನ್ನು ಮನೆಗೆ ಆಹ್ವಾನಿಸಿದ್ದ. ಪತ್ನಿ ಮನೆಗೆ ಬಂದಾಗ, ಯುವತಿಯ ಶವ ಬೆಡ್ ಮೇಲೆ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!