March 21, 2026

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ, ವಕೀಲ ರಾಜೇಶ್ ಗೆ ಜಾಮೀನು

0
image_editor_output_image-1040777512-1644384880853.jpg

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಎಸಗಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ವಕೀಲ, ಕೆ.ಎಸ್.ಎನ್. ರಾಜೇಶ್ಗೆ, ಹೈಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ.

ಇಂಟರ್ನ್‌ಶಿಪ್‌ಗೆ ಬಂದ ಮಹಾರಾಷ್ಟ್ರ ಮೂಲದ ಕಾನೂನು ವಿದ್ಯಾರ್ಥಿನಿಗೆ ವಕೀಲ ರಾಜೇಶ್ ತನ್ನ ಆಫೀಸಿನಲ್ಲಿ ಲೈಂಗಿಕ ಹಿಂಸೆ ನೀಡಿದ ಆರೋಪ ಕೇಳಿಬಂದಿದ್ದು, ಕೇಸು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜೇಶ್ ವಿರುದ್ಧ ಅ.18ರಂದು ಮಹಿಳಾ ಠಾಣಾ ಪೊಲೀಸರು ಕೇಸು ದಾಖಲಿಸಿದ್ದರು.

ಆ ಕ್ಷಣದಿಂದ ತಲೆಮರೆಸಿಕೊಂಡಿದ್ದ ಆರೋಪಿ ಖ್ಯಾತ ವಕೀಲ ರಾಜೇಶ್‌ರವರನ್ನು ಹುಡುಕಲು ಪೊಲೀಸ್ ತಂಡ ಕೂಡ ರಚನೆಯಾಗಿತ್ತು. ಶೋಧ ಕಾರ್ಯ ಮುಂದುವರೆದಿತ್ತು.

ಈ ಮಧ್ಯೆ ಸಂತ್ರಸ್ತ ಯುವತಿಯನ್ನು ದೂರು ನೀಡದಂತೆ ಬೆದರಿಸಿದ ಕಾರಣಕ್ಕೆ ಉರ್ವ ಪೊಲೀಸ್ ಠಾಣೆಯ ಎಸ್‌ಐ ಸೇರಿ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!