March 21, 2026

ಪಡೀಲ್ ಬಳಿ ಕಲ್ಲಿದ್ದಲು ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ

0
image_editor_output_image476236709-1644383895529.jpg

ಮಂಗಳೂರು: ನಗರದ ಪಣಂಬೂರಿನಿಂದ ಬಳ್ಳಾರಿಗೆ ಕಲ್ಲಿದ್ದಲು ಹೇರಿಕೊಂಡು ಹೋಗುತ್ತಿದ್ದ 10 ವೀಲರ್‌ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ.

ಮರೋಳಿ ಪಡೀಲಿನ ಸಮೀಪ ಲಾರಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಮರೋಳಿ ಕೊನೆ ತಿರುವಿನಲ್ಲಿ ಪಲ್ಟಿಯಾಗಿದೆ.

ಇಂದು ಮುಂಜಾನೆ 5 ಗಂಟೆಗೆ ಲಾರಿ ಪಲ್ಟಿಯಾಗಿದ್ದು, ಚಾಲಕ ಜಾರ್ಖಂಡ್ ನಿವಾಸಿ ಸುಬೋದ್‌(21) ಲಾರಿಯೊಳಗೆ ಸಿಲುಕಿಕೊಂಡಿದ್ದು,

ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಈತನನ್ನು ಹೊರಕ್ಕೆ ತೆಗೆಯಲಾಗಿದೆ. ಹೈವೇ ಪ್ಯಾಟ್ರೋಲಿಂಗ್‌ ವಾಹನದ ಸಿಬ್ಬಂದಿ, ಕದ್ರಿ ಅಗ್ನಿಶಾಮಕ ದಳ, ನಾಗುರಿ ಸಂಚಾರಿ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಅವನನ್ನು ಹೊರಕ್ಕೆ ತೆಗೆದು ಪಾರು ಮಾಡಿದ್ದು, ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಲಾರಿಯ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!