February 2, 2026

ಹಿಜಾಬ್ ವಿವಾದ ಬಗೆಹರಿಸಲು ಸ್ವಾಮೀಜಿಗಳು ಮಧ್ಯ ಪ್ರವೇಶಿಸಬೇಕು: ಎಸ್.ಬಿ.ದಾರಿಮಿ

0
IMG_20220208_194914.jpg

ಬಂಟ್ವಾಳ: ಸ್ಥಳೀಯವಾಗಿ ಮುಗಿಸಬೇಕಾದ ಹಿಜಾಬ್ ಸಮಸ್ಯೆಯನ್ನು ರಾಜ್ಯಾಧ್ಯಂತ ವ್ಯಾಪಿಸುವಂತೆ ಮಾಡಿರುವುದರ ಹಿಂದೆ ರಾಜ್ಯಕೀಯ ಷಡ್ಯಂತರ ಅಡಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ದ.ಕ. ಜಿಲ್ಲಾ ಇಮಾಮ್ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಹೇಳಿದರು.

ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಮಸೀದಿ ಆವರಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಬಗ್ಗೆ ವಿವಾದ ಸೃಷ್ಟಿಯಾಗಿರುವುದು ದುರದೃಷ್ಟಕರ. ಹಿಜಾಬ್ ಬಗ್ಗೆ ವಿವಾದ ಮಾಡುವ ಅಗತ್ಯ ಇರಲಿಲ್ಲ. ಇದು ಗುಬ್ಬಚ್ಚಿಯ ಮೇಲೆ ನಡೆಯುತ್ತಿರುವ ಬ್ರಹ್ಮಾಶ್ತçವಾಗಿದೆ. ಇದನ್ನು ಸರಕಾರ, ಶಿಕ್ಷಣ ಇಲಾಖೆ, ಶಿಕ್ಷಕರು, ಪೋಷಕರು ಒಟ್ಟು ಸೇರಿ ಮಾತುಕತೆ ಮೂಲಕ ಬಗೆಹರಿಸಬೇಕಾದ ವಿಚಾರವಾಗಿದೆ ಎಂದು ಹೇಳಿದರು.

ಹಿಜಾಬ್ ಬಗ್ಗೆ ಅಂತರ್ ರಾಷ್ಟಿçÃಯ ಮಟ್ಟದಲ್ಲಿ ಚರ್ಚೆಯಾಗಿ ನಮ್ಮ ದೇಶದ ಮಾನ ಹರಾಜಾಗುತ್ತಿದೆ. ರಾಜ್ಯದ ಮುಸ್ಲಿಮರು ಮಾತ್ರ ಹಿಜಾಬ್ ಧರಿಸುವುದಲ್ಲ. ಪ್ರಪಂಚದ ಎಲ್ಲಾ ಮುಸ್ಲಿಮರು ಹಿಜಾಬ್ ಧರಿಸುತ್ತಿದ್ದಾರೆ. ಹಿಜಾಬ್ ಎಂದರೆ ತಲೆ ಮುಚ್ಚಿಕೊಳ್ಳುವುದಾಗಿದೆ. ಅದು ಧಾರ್ಮಿಕ ಮತ್ತು ಸಾಂವಿಧಾನಿಕ ಹಕ್ಕೂ ಆಗಿದೆ. ಸಮವಸ್ತçದ ಶಾಲಿನಲ್ಲಿ ತಲೆಮುಚ್ಚಿಕೊಂಡರೆ ಸಮವಸ್ತçಕ್ಕೆ ಯಾವುದೇ ತೊಂದರೆ ಇಲ್ಲ. ಹಿಜಾಬ್ ಮುಸ್ಲಿಮರು ಮಾತ್ರವಲ್ಲದೆ ಹಿಂದೂ, ಸಿಖ್ ಧರ್ಮದಲ್ಲೂ ಇದೆ ಎಂದು ಅವರು ಹೇಳಿದರು.

ಹಿಜಾಬ್ ಹೆಸರಿನಲ್ಲಿ ಹಿಂದೂ ಮುಸ್ಲಿಮರ ನಡುವೆ ಕಂದಕ ಉಂಟು ಮಾಡಲು ಯಾರಿಗೂ ಆಸ್ಪದ ನೀಡಬಾರದು. ಹಿಂದೂ ಮುಸ್ಲಿಮರು ಸೌಹಾರ್ದದಿಂದ ಇದ್ದರೆ ಮಾತ್ರ ಈ ದೇಶಕ್ಕೆ ಭವಿಷ್ಯ ಇದೆ. ಹಾಗಾಗಿ ಹಿಜಾಬ್ ಬಗ್ಗೆ ಉಂಟಾಗಿರುವ ವಿವಾದವನ್ನು ಬಗೆಹರಿಸಲು ಸ್ವಾಮೀಜಿಗಳು ಮಧ್ಯ ಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಂಇಯ್ಯತುಲ್ ಉಲೆಮಾ ಪುತ್ತೂರು ತಾಲೂಕು ಕಾರ್ಯದರ್ಶಿ ಅಬ್ದುಲ್ ಹಮಿದ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ದ.ಕ. ಜಿಲ್ಲಾ ದಾರಿಮಿ ಒಕ್ಕೂಟದ ಅಧ್ಯಕ್ಷ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ, ಪುತ್ತೂರು ತಾಲೂಕು ಇಮಾಮ್ ಒಕ್ಕೂಟದ ಅಧ್ಯಕ್ಷ ಹಬೀಬರ‍್ರಹ್ಮಾನ್ ತಂಙಳ್, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಉಪಾಧ್ಯಕ್ಷ ಸಿದ್ದೀಕ್ ಬಂಟ್ವಾಳ ಸಹಿತ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!