March 21, 2026

‘ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಸೋಮವಾರದಿಂದ ಹಿಜಾಬ್‌-ಕೇಸರಿ ಬ್ಯಾನ್‌’: SDMC ನಿರ್ಧಾರ

0
IMG_20220201_222112.jpg

ಉಡುಪಿ: ಜಿಲ್ಲೆಯಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು ಗಲಾಟೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಆಡಳಿತ ಮಂಡಳಿ ಸಭೆ ಮುಗಿದೆ.

ಈ ಸಭೆಯಲ್ಲಿ ನಿರ್ಧಾರವಾದಂತೆ, ತರಗತಿಯೊಳಗೆ ಧಾರ್ಮಿಕತೆಗೆ ಅವಕಾಶವಿಲ್ಲ. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ತರಗತಿಗೆ ಯಾರೂ ಬರುವಂತಿಲ್ಲ. ಸೋಮವಾರದಿಂದ ಕಾಲೇಜಿನ ನಿಯಮ ಪಾಲಿಸಿ ಕಾಲೇಜಿಗೆ ಬರುವವರಿಗೆ ಮಾತ್ರ ಅವಕಾಶ.

ಕಾಲೇಜು ಗೇಟ್‌ ತನಕ ಯಾವುದೇ ವಸ್ತ್ರ ಧರಿಸಿ ಬರಬಹುದು ಆದರೆ ತರಗತಿಗೆ ಪ್ರವೇಶಿಸುವಾಗ ಹಿಜಾಬ್‌ ಅಥವಾ ಕೇಸರಿ ಶಾಲಿಗೆ ಅವಕಾಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸದಸ್ಯ ಮೋಹನದಾಸ ಶೆಣೈ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!