March 21, 2026

ಕರ್ನಾಟಕದ ಶಾಲಾ ಪಠ್ಯಪುಸ್ತಕದಲ್ಲಿ ಮಲೆಯಾಳಿ ಚಿತ್ರ ನಟನ‌ ಚಿತ್ರ

0
image_editor_output_image1956230674-1643692654473.jpg

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಲಾ ಪಠ್ಯಪುಸ್ತಕದಲ್ಲಿ ಮಲೆಯಾಳಿ ಚಿತ್ರ ನಟ ಕುಂಚಾಕೋ ಬಾಬನ್ ಅವರ ಚಿತ್ರವನ್ನು ಅಂಚೆಯಣ್ಣನ ಶೀರ್ಷಿಕೆ ಜತೆ ಪ್ರಕಟಿಸಿರುವುದರ ಔಚಿತ್ಯ ಪ್ರಶ್ನಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್‌, ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

ಪಠ್ಯಪುಸ್ತಕದಲ್ಲಿ ತಮ್ಮ ಚಿತ್ರ ಇರುವುದನ್ನು ಟ್ಯಾಗ್ ಮಾಡಿ ಬಾಬನ್‌ ಮಾಡಿರುವ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿರುವ ಸುರೇಶ್‌, ‘ಪಠ್ಯಪುಸ್ತಕ ಸಂಘವು ಯಾವುದೇ ಪರಿಶೀಲನೆ ನಡೆಸದೇ ಅಂತರ್ಜಾಲದಿಂದ ಚಿತ್ರ ಗಳನ್ನು ತೆಗೆದು ಪ್ರಕಟಿಸುತ್ತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿಬೇಕೇ’ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!