ವಿಟ್ಲದಲ್ಲಿ ಸಿ.ಎಫ್.ಐ ಪ್ರತಿಭಟನೆ: ಹಲವು ಕಾರ್ಯಕರ್ತರು ವಿಟ್ಲ ಪೊಲೀಸರ ವಶಕ್ಕೆ
ವಿಟ್ಲ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಹುತಾತ್ಮ ದಿನದ ಅಂಗವಾಗಿ ಗಾಂಧಿಯನ್ನು ಕೊಂದ ಆರ್ ಎಸ್ ಎಸ್ ? ಎಂಬ ಘೋಷವಾಕ್ಯದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ವಿಟ್ಲದಲ್ಲಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




