ಕೆಡಿಪಿ ಸಭೆಯಲ್ಲಿ ಅಸಮರ್ಪಕ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಸಚಿವ ಸುನಿಲ್ ಕುಮಾರ್ ಗರಂ
ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸಮರ್ಪಕ ಮಾಹಿತಿ ನೀಡಿದ ಜಲಜೀವನ್ ವಿಭಾಗದ ಅಧಿಕಾರಿಯ ವಿರುದ್ದ ಇಂಧನ ಸಚಿವ ವಿ.ಸುನೀಲ್ ಕುಮಾರ್ ಗರಂ ಆದ ಘಟನೆ ನಡೆದಿದೆ.
ಕೆಡಿಪಿ ಸಭೆಯಲ್ಲಿ ಅಸಮರ್ಪಕ ಮಾಹಿತಿ ನೀಡಿದ ಜಲಜೀವನ್ ವಿಭಾಗದ ಅಧಿಕಾರಿಯ ವಿರುದ್ಧ ಗರಂ ಆದ, ಸಚಿವ ಸುನೀಲ್ ಕುಮಾರ್, ನೀವು ಇಲಾಖೆಯಲ್ಲಿ ಕೆಲ್ಸ ಮಾಡೋಕೆ ಅನ್ ಫಿಟ್ ಇದ್ದೀರಿ ಅಂತ ತರಾಟೆಗೆ ತೆಗೆದುಕೊಂಡರು.
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಕೆಡಿಪಿ ಸಭೆಯಲ್ಲಿ, ಜಲಜೀವನ್ ಗೆ ಸಂಬಂಧಿಸಿ ಸಚಿವರು ಆ ಇಲಾಖೆಯ ಅಧಿಕಾರಿಯಿಂದ ಮಾಹಿತಿ ಬಯಸಿದ್ದರು. ಇದೇ ವೇಳೆ ಅಧಿಕಾರಿ ನೀಡಿದ ಉತ್ತರದಲ್ಲಿ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಇದಕ್ಕೆ ಗರಂ ಆದ ಸಚಿವರು ನನಗೆ ಪ್ರಾಕ್ಟಿಕಲ್ ಏನಾಗಿದೆ ಅದು ಬೇಕು. ಕಾಲಹರಣಕ್ಕೆ ಸಭೆಗೆ ಬರಬೇಡಿ. ಸಭೆಗೆ ಬರುವಾಗ ವಾಸ್ತವಾಂಶ ವರದಿ ತನ್ನಿ, ಪೂರ್ಣ ಮಾಹಿತಿ ನನಗೆ ಬೇಕು. ಯಾಕೆ ತಪ್ಪು ರಿಪೋರ್ಟ್ ನೀಡುತ್ತೀರಿ ನೀವು ಇಲಾಖೆಯ ಕೆಲ್ಸ ಮಾಡೋಕೆ ಆನ್ ಫಿಟ್ ಇದ್ದೀರಿ ಅಂತ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.




