ಸಾರ್ವಜನಿಕ ಸ್ಥಳಗಳಲ್ಲಿ ಫ್ರಾಂಕ್ ವೀಡಿಯೋ ಚಿತ್ರೀಕರಣ: 17 ಮಂದಿಯ ಬಂಧನ
ಟೆಹ್ರಾನ್: ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಬಕರಾ ಮಾಡುತ್ತಿದ್ದ 17 ಮಂದಿಯನ್ನು ಟೆಹ್ರಾನ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೆಟ್ರೊ ಲಿಫ್ಟ್ ನಲ್ಲಿ ಜನರ ಮುಖಕ್ಕೆ ಕೇಕ್ ಮೆತ್ತಿ ಓಡುವುದು, ಏಕಾಏಕಿ ರಸ್ತೆ ಮಧ್ಯ ಜನರ ಮೇಲೆ ಬಂದೂಕಿನಿಂದ ದಾಳಿ ನಡೆಸುವಂತೆ ನಕಲಿ ಗನ್ ಪ್ರದರ್ಶಿಸುವುದು ಸೇರಿದಂತೆ ಇತ್ಯಾದಿ ತಂತ್ರಗಳನ್ನು ಹೂಡಿ ವಿಡಿಯೋ ಚಿತ್ರೀಕರಣದಲ್ಲಿ ಹಲವು ಮಂದಿ ತೊಡಗಿದ್ದರು.
ಈ ರೀತಿಯ ವಿಡಿಯೋಗಳಿಂದ ದೇಶದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಮನರಂಜನೆಗೋಸ್ಕರ ಈ ವಿಡಿಯೋಗಳನ್ನು ತಯಾರಿಸಿದ್ದರೂ ದೇಶದ ಕುರಿತು ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.




