ಬಾಂದ್ರಾದಲ್ಲಿ ಬಹುಮಹಡಿ ಕಟ್ಟಡ ಕುಸಿತ:
ಮೂವರು ಬಾಲಕಿಯರು ಸೇರಿದಂತೆ 9 ಜನರು ಗಾಯ
ಮುಂಬೈ: ಮುಂಬೈನ ಉಪನಗರ ಬಾಂದ್ರಾದಲ್ಲಿ ಬುಧವಾರ ಬಹುಮಹಡಿ ಕಟ್ಟಡ ಕುಸಿದು ಮೂವರು ಬಾಲಕಿಯರು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಉಪನಗರದ ಬೆಹ್ರಾಮ್ ನಗರದಲ್ಲಿ ಸಂಜೆ 3.50ರ ಹೊತ್ತಿಗೆ ಸುಮಾರು ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ತಿಳಿಸಿದ್ದಾರೆ.
ಆರು ಆಂಬ್ಯುಲೆನ್ಸ್, ಐದು ಅಗ್ನಿಶಾಮಕ ವಾಹನ ಹಾಗೂ ಮತ್ತೊಂದು ರಕ್ಷಣಾ ವಾಹನವು ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದವು.




