February 3, 2026

ಎಸ್ ಡಿ ಪಿ ಐ ವಿಟ್ಲ ಬ್ಲಾಕ್ ಸಮಿತಿ ಹಾಗೂ ಪಟ್ಟಣ ಸಮಿತಿ ವತಿಯಿಂದ ವಿಟ್ಲ ವತಿಯಿಂದ: ಪ್ಯಾಶಿಷ್ಟರ ಹಿಡಿತದಿಂದ ಗಣರಾಜ್ಯವನ್ನು ಉಳಿಸಲು ಒಂದಾಗೋಣ ಕಾರ್ಯಕ್ರಮ

0
IMG_20220126_181425.jpg

ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ಯಾಶಿಷ್ಟರ ಹಿಡಿತದಿಂದ ಗಣರಾಜ್ಯವನ್ನು ಉಳಿಸಲು ಒಂದಾಗೋಣ ಎಂಬ ವಾಕ್ಯದೊಂದಿಗೆ ಹಮ್ಮಿಕೊಂಡ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಎಸ್ ಡಿ ಪಿ ಐ ವಿಟ್ಲ ಬ್ಲಾಕ್ ಸಮಿತಿ ಹಾಗೂ ಪಟ್ಟಣ ಸಮಿತಿ ವತಿಯಿಂದ ವಿಟ್ಲ ಮೆಗಿನಪೇಟೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನಡೆಸಲಾಯಿತು.

ಧ್ವಜಾರೋಹಣವನ್ನು ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಶಾಕಿರ ಅಬ್ದುಲ್ಲ,ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದಿಕ್ ಉರಿಮಜಲು ಹಾಗೂ ಬ್ಲಾಕ್ ಕಾರ್ಯದರ್ಶಿಗಳಾದ ಮುನೀರ್ ಎಂ ಕೆ ನೆರವೇರಿಸಿದರು.

ನಂತರ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿಗಳಾದ ಶಾಕಿರ್ ಅಳಕೆಮಜಲು ಸಂವಿಧಾನದ ಬಗ್ಗೆ ವಿವರವಾಗಿ ಮಾತನಾಡಿ ಇವತ್ತು ಪ್ಯಾಶಿಷ್ಟರ ಹಿಡಿತದಲ್ಲಿ ಇರುವ ಗಣರಾಜ್ಯವನ್ನು ಉಳಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಲಿದೆ ಎಂದು ಭರವಸೆಯ ಮಾತುಗಳನ್ನು ಹೇಳಿ 73ನೇ ಗಣರಾಜ್ಯೋತ್ಸವದ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಕಾರ್ಯದರ್ಶಿಗಳು ವಿಟ್ಲ ಬ್ಲಾಕ್ ಉಸ್ತುವಾರಿಗಳಾದ ಅನ್ವರ್ ಪೆರುವಾಯಿ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ PFI ವಿಟ್ಲ ಡಿವಿಷನ್ ಕಾರ್ಯದರ್ಶಿಗಳಾದ ನಝೀರ್ ಪುಣಚ ,ಉಪನ್ಯಾಸಕರಾದ ಮುಸ್ತಾಫ ಮೆಗಿನಪೇಟೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ವಿಟ್ಲ ಪಟ್ಟಣ ಪಂಚಾಯತ್ ಸಮಿತಿ ಕಾರ್ಯದರ್ಶಿಗಳಾದ ಸಿರಾಜ್ ಕಡಂಬು, ಹಾಗೂ ಕಂಬಳಬೆಟ್ಟು ಬೂತ್ ಸಮಿತಿ ಅಧ್ಯಕ್ಷರು,ಹಾಗೂ ಪಟ್ಟಣ ಪಂಚಾಯತ್ ಸಮಿತಿ ವ್ಯಾಪ್ತಿಯ ಎಲ್ಲಾ ಬೂತ್ ಸಮಿತಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.ಪಕ್ಷದ ಕಾರ್ಯಕರ್ತರು ,ಹಿತೈಷಿಗಳು ಭಾಗವಹಿಸಿದರು.

ಎಸ್ ಡಿ ಪಿ ಐ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯರಾದ ರಹೀಮಾನ್ ಕಂಬಳಬೆಟ್ಟು ರವರು ಸ್ವಾಗತಿಸಿ ನಿರೂಪಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ ಗೀತೆಯೊಂದಿಗೆ ಸಿಹಿ ತಿಂಡಿ ವಿತರಿಸಿ ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!