March 20, 2026

ಕೈ-ಕಾಲಿಗೆ ಕೋಳ ಬಿಗಿದುಕೊಂಡು ಕಡಲಲ್ಲಿ 3.55 ಕಿ.ಮೀ. ಈಜುವ ಮೂಲಕ ದಾಖಲೆ ಬರೆದ ಗಂಗಾಧರ್

0
image_editor_output_image-2010176446-1643087823550.jpg

ಉಡುಪಿ: ಸೋಮವಾರ ಸಮುದ್ರ ಶಾಂತವಾಗಿರಲಿಲ್ಲ. ಬೆಳಗ್ಗಿ ನಿಂದಲೇ ಅಬ್ಬರ ಜೋರಾಗಿತ್ತು. ಅದಾವುದನ್ನೂ ಲೆಕ್ಕಿಸದೆ ಕೈ-ಕಾಲಿಗೆ ಕೋಳ ಬಿಗಿದುಕೊಂಡು ಸತತ 5.34 ಗಂಟೆಗಳಲ್ಲಿ 3,550 ಮೀಟರ್‌(3.55 ಕಿ.ಮೀ.) ಈಜುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ 66ರ ವಯಸ್ಸಿನ ರಾಷ್ಟ್ರೀಯ ಈಜುಪಟು ಗಂಗಾಧರ್‌ ಕಡೆಕಾರ್‌ ಹೊಸ ದಾಖಲೆ ಬರೆದರು.

ಕಿದಿಯೂರು ಪಡುಕರೆ ಶ್ರೀದೇವಿ ಭಜನ ಮಂದಿರ ಬಳಿ ಬೆಳಗ್ಗೆ 7.51ಕ್ಕೆ ಸಮುದ್ರಕ್ಕೆ ಧುಮುಕಿದ ಗಂಗಾಧರ್‌ ದಡ ತಲುಪುವಾಗ ಮಧ್ಯಾಹ್ನ 1.25 ಆಗಿತ್ತು. ಈಜು ಆರಂಭ ಸ್ಥಳದಿಂದ ಕೊನೆಯ ತನಕವೂ ತೇಲುವ ಮಾರ್ಕಿಂಗ್‌ ಮಾಡಲಾಗಿತ್ತು. ಸಾಧನೆ ವೇಳೆ ಸುತ್ತಲೂ ರಕ್ಷಣಾ ಬೋಟ್‌ಗಳಿದ್ದವು.

ಜೈ ದುರ್ಗಾ ಸ್ವಿಮ್ಮಿಂಗ್‌ ಕ್ಲಬ್‌ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಗಂಗಾಧರ್‌ ಅವರ ಸಾಧನೆ ವೀಕ್ಷಣೆಗೆ ಸಾರ್ವಜನಿ ಕರನ್ನು ಬೋಟ್‌ ಮೂಲಕ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.

2021 ಜನವರಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1.4 ಕಿ.ಮೀ. ದೂರವನ್ನು ಬ್ರೆಸ್ಟ್‌ಸ್ಟ್ರೋಕ್‌ ಶೈಲಿಯಲ್ಲಿ ಈಜಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಲು 1.30 ಗಂಟೆ ತೆಗೆದುಕೊಂಡಿದ್ದರು

Leave a Reply

Your email address will not be published. Required fields are marked *

error: Content is protected !!