2021ರ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗನಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಆಯ್ಕೆ
ದುಬೈ: ಪಾಕಿಸ್ಥಾನದ ನಾಯಕ ಬಾಬರ್ ಅಜಮ್ ಅವರು 2021 ರ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.
ಆರು ಪಂದ್ಯಗಳಲ್ಲಿ 67.50 ಸರಾಸರಿಯಲ್ಲಿ 405 ರನ್ ಗಳಿಸಿದ ಅವರ ಸಾಧನೆ ಪರಿಗಣಿಸಿ ಆಯ್ಕೆ ಮಾಡಲಾಗಿದೆ.
27 ರ ಹರೆಯದ ಬಾಬರ್ ಅಜಮ್ ದಕ್ಷಿಣ ಆಫ್ರಿಕಾ ವಿರುದ್ಧದ 2-1 ಸರಣಿಯ ವಿಜಯದಲ್ಲಿ 228 ರನ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು ಮತ್ತು ಎರಡೂ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.




