March 23, 2026

ಸುಳ್ಯ ಮಗುವಿಗೆ ಚಿಕಿತ್ಸೆ ಕೊಡಿಸಿ ವಾಪಾಸಾಗುತ್ತಿದ್ದಾಗ ರಿಕ್ಷಾ ಅಪಘಾತ:
ಮಗು ಮೃತ್ಯು

0
images.jpg

ಸುಳ್ಯ: ಅನಾರೋಗ್ಯ ಗೊಂಡಿದ್ದ ಮಗುವನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಮರಳುತ್ತಿದ್ದ ಸಂದರ್ಭ ರಿಕ್ಷಾ ಮರಕ್ಕೆ ಗುದ್ಧಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸುಳ್ಯದಿಂದ ವರದಿಯಾಗಿದೆ.

ಕಲ್ಮಡ್ಕದಲ್ಲಿ ಮಗುವಿಗೆ ಅಸೌಖ್ಯವಿದ್ದ ಕಾರಣ ಮಗುವನ್ನು ರಿಕ್ಷಾದಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ವಾಪಾಸು ಮನೆಗೆ ರಾತ್ರಿ ತೆರಳುತ್ತಿದ್ದಾಗ ಬೇಗಮಲೆ ಸಮೀಪ ರಿಕ್ಷಾ ಮರಕ್ಕೆ ಗುದ್ದಿ ಈ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!