February 4, 2026

ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್ ಸುರಲ್ಪಾಡಿ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಅಶ್ರಫ್ ಟಿ.ಕೆ ಆಯ್ಕೆ.

0
IMG-20220107-WA0113.jpg


ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್ ಸುರಲ್ಪಾಡಿ ಇದರ ವಾರ್ಷಿಕ ಮಹಾಸಭೆ ದಿನಾಂಕ 02 -01-2021 ರಂದು ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.

ಜಾವಿದ್ ಅಬುಬಕ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಾದರ್ ಹಾಶಿಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.2021-2022ರ ವಾರ್ಷಿಕ ವರದಿಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಟಿ.ಕೆ ಮಂಡಿಸಿದರು.

15 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯಲ್ಲಿ 2022-2023 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮೊಹಮ್ಮದ್ ಅಶ್ರಫ್ ಟಿ. ಕೆ, ಉಪಾಧ್ಯಕ್ಷರಾಗಿ ಅಬುಬಕ್ಕರ್ ನಸಾಫ್, ಕಾರ್ಯದರ್ಶಿಯಾಗಿ ಅಬ್ದುಲ್ ರಾಝಿಕ್, ಜೊತೆ ಕಾರ್ಯದರ್ಶಿಯಾಗಿ ಶಕೀಲ್, ಕೋಶದಿಕಾರಿಯಾಗಿ ಅಶ್ಫಾಕ್ ಆರ್. ಎಸ್, ಲೆಕ್ಕ ಪರಿಶೋಧಕರಾಗಿ ಖಾದರ್ ನಿಹಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಶಾಕಿರ್ ಹುಸೈನ್ ರನ್ನು ಆಯ್ಕೆ ಮಾಡಲಾಯಿತು. ನವಾಝ್ ಆಲಮ್, ಅರ್ಷದ್ ಅಹ್ಮದ್ ಬಾವ, ಮುಬೀನ್, ರಿಝ್ವಾನ್, ಅಬ್ದುಲ್ ರಶೀದ್ ಮುಂತಾದವರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಹಾಲಿ ಅಧ್ಯಕ್ಷರಾದ ಅರ್ಷದ್ ಅಹ್ಮದ್ ಬಾವರವರು ನೂತನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಟಿ. ಕೆ ಯವರಿಗೆ ಅಧಿಕಾರ ಹಸ್ತಾಂತರ ಮಾಡುವ ಕಾರ್ಯಕ್ರಮಕ್ಕೆ ಸಂಸ್ಥೆಯ ನಿರ್ದೇಶಕರುಗಳಾದ ಅಶ್ರಫ್ ಆರ್. ಎಸ್, ಶರೀಫ್ ಬಿ. ಎಸ್ ಮತ್ತು ಇಸ್ಮಾಯಿಲ್ ಮರವೂರು ಸಾಕ್ಷಿಯಾದರು.

Leave a Reply

Your email address will not be published. Required fields are marked *

error: Content is protected !!