February 4, 2026

ಸುಳ್ಯ: ಶೋ ರೂಮಿನಿಂದ ಗ್ರಾಹಕರಿಗೆ ನೀಡಲು ಬರುತ್ತಿದ್ದ ಹೊಸ ಕಾರು ಹಾಗೂ ಪಿಕಪ್ ನಡುವೆ ಅಪಘಾತ

0
IMG-20220107-WA0029.jpg

ಸುಳ್ಯ: ಶ್ರೀರಾಮಪೇಟೆ ಬಳಿ ಪುತ್ತೂರಿನಿಂದ ಸುಳ್ಯದ ಗ್ರಾಹಕರಿಗೆ ನೀಡಲೆಂದು ಬರುತ್ತಿದ್ದ ಹೊಸ ಶೋರೂಮ್ ಕಾರು ಗಾಂಧಿನಗರದಿಂದ ಹಳೆಗೇಟು ಕಡೆ ಹೋಗುತ್ತಿದ್ದ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇಂದು ಸಂಜೆ ನಡೆದಿದೆ.

ಶ್ರೀರಾಮ ಪೇಟೆಯಿಂದ ಜೂನಿಯರ್ ಕಾಲೇಜು ರಸ್ತೆ ತಿರುಗುವಲ್ಲಿ ಈ ಘಟನೆ ನಡೆದಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಎರಡು ವಾಹನಗಳು ಪರಸ್ಪರ ಗುದ್ದಿದ ರಭಸದಲ್ಲಿ ಕಾರಿನ ಆಯಿಲ್ ಟ್ಯಾಂಕ್ ಸೋರಿಕೆ ಗೊಂಡು ರಸ್ತೆಯಲ್ಲಿ ಇತರ ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು.

ಈ ಸಂದರ್ಭದಲ್ಲಿ ಸ್ಥಳೀಯರು ಕೂಡಲೇ ರಸ್ತೆಗೆ ಮಣ್ಣು ಹಾಕಿ ಯಾವುದೇ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿದರು. ಘಟನೆಯಿಂದ ಸುಮಾರು ಅರ್ಧಗಂಟೆ ಈ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!