ಮಂಗಳಪದವು: ಕನ್ನಡ ರಾಜ್ಯೋತ್ಸವ ಆಚರಣೆ- ಆಟೋ ರ್ಯಾಲಿ-ಸಮವಸ್ತ್ರ ವಿತರಣೆ
ವಿಟ್ಲ: ಟೀಮ್ ನವಗ್ರಾಮ ಫೌಂಡೇಶನ್ (ರಿ.) ಹಾಗೂ ‘ಸಂಚಾರಿ ಕನ್ನಡಿಗ’ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಿಲಪದವು ಜಂಕ್ಷನ್‌ನಲ್ಲಿ ಬೃಹತ್ ಆಟೋ ಜಾಥಾ ಮತ್ತು ನೇತ್ರಾವತಿ ಆಟೋ ಚಾಲಕರಿಗೆ ಖಾಕಿ ವಿತರಣೆ ಕಾರ್ಯಕ್ರಮ ನಡೆಯಿತು.



ವಿಟ್ಲ ಪೊಲೀಸ್ ಠಾಣೆಯ ಎಸೈ ರತನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿ ಸಮವಸ್ತ್ರ ವಿತರಿಸಿದರು.
ಟೀಮ್ ನವಗ್ರಾಮ ಫೌಂಡೇಶನ್ ರಿ. ಸ್ಥಾಪಕ ಅಬ್ಬು ನವಗ್ರಾಮ, ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ, ಟೀಮ್ ನವಗ್ರಾಮ ಫೌಂಡೇಶನ್ ಟ್ರಸ್ಟಿಗಳಾದ ಶಂಶಿರ್ ನೆಲ್ಲಿಗುಡ್ಡೆ, ಇಸಾಕ್ ಮಂಗಳಪದವು, ಟೀಮ್ ನವಗ್ರಾಮ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ನವಗ್ರಾಮ, ಸಂಚಾರಿ ಕನ್ನಡಿಗ ಮೊಯಿದ್ದೀನ್ ಸಾಲಿ ಮುಡಿ ಮಾರ್., ನೇತ್ರಾವತಿ ಆಟೋ ಚಾಲಕ ಸಂಘದ ಅಧ್ಯಕ್ಷ ಚಂದ್ರಶೇಖರ, ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ಮಂಗಿಲಪದವು ಅಧ್ಯಕ್ಷ ಇಸ್ಮಾಯಿಲ್, ಹಿರಿಯ ಆಟೋ ಚಾಲಕ ರುಕ್ಮಯ,ವೀರಕಂಬ
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಉಬೈದ್ ಮಂಗಳಪದವು ಉಪಸ್ಥಿತರಿದ್ದರು.




