ವಿಟ್ಲ: ದಿ ನಾಲೇಡ್ಜ್ ಹಬ್ ಶಿಕ್ಷಣ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿದ್ಯಾಶಂಕರ್ ಡಿ ಅವರಿಗೆ ಸನ್ಮಾನ
ವಿಟ್ಲ: ವಿಟ್ಲದ ದಿ ನಾಲೇಡ್ಜ್ ಹಬ್ ಶಿಕ್ಷಣ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಟ್ಲ ಪಿಎಂಶ್ರೀ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ವಿದ್ಯಾಶಂಕರ್ ಡಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಪಿಎಂಶ್ರೀ ಶಾಲಾ ಶಿಕ್ಷಕಿ ಶ್ರೀಮತಿ ಕೆ, ನಾಲೇಡ್ಜ್ ಹಬ್ ನ ಶಿಕ್ಷಕರಾದ ಮುಸ್ತಫಾ ಖಲೀಲ್ ವಿಟ್ಲ, ಉಮಾನಾಥ್, ಸುರೈಯ ಉಪಸ್ಥಿತರಿದ್ದರು.ನಾಲೇಡ್ಜ್ ಹಬ್ ನ ಆಡಳಿತ ನಿರ್ದೇಶಕ ಮಹಮ್ಮದ್ ಅಲಿ ವಿಟ್ಲ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿನಿ ವಿದೀಶಾ ಸ್ವಾಗತಿಸಿದರು.





