ವಿಟ್ಲದಲ್ಲಿ ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಉದ್ಘಾಟನೆ: ಎಲ್ಲವೂ ಒಂದೇ ಸೂರಿನಲ್ಲಿ ಆನ್ ಲೈನ್ ಸೇವೆಗಳು, ವಾಹನಗಳ ವಾಯುಮಾಲಿನ್ಯ ತಪಾಸಣೆ, ವಾಹನಗಳ ಇನ್ಶ್ಯೂರೆನ್ಸ್, ಮೊದಲಾದ ಸೇವೆಗಳು ಲಭ್ಯ
ವಿಟ್ಲ: ಬೆಳೆಯುತ್ತಿರುವ ವಿಟ್ಲಕ್ಕೆ ಇಂತಹ ಸಂಸ್ಥೆ ಅತೀ ಅಗತ್ಯ. ಸಂಸ್ಥೆ ಬೆಳೆಯಲು ಶ್ರಮ – ಪ್ರಾಮಾಣಿಕತೆ ಅಗತ್ಯ. ಪ್ರಾಮಾಣಿಕತೆಯಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಹೆಚ್ಚು. ಈಗಾಗಲೇ ನೇಳಕಟ್ಟೆಯಲ್ಲಿ ಸಂಸ್ಥೆ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಇಲ್ಲಿಯೂ ಅದೇ ರೀತಿ ಸಂಸ್ಥೆ ಬೆಳೆಯಲಿ ಎಂದು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟುರವರು ಹೇಳಿದರು.

ಅವರು ನೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ವಹಿಕಲ್ ಬಜಾರ್ ನ ಸಹಸಂಸ್ಥೆ ವಿಟ್ಲ ಮೇಗಿನಪೇಟೆಯಲ್ಲಿ ಆರಂಭಗೊಂಡ ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕೊಡಾಜೆ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಅಝೀಜ್ ದಾರಿಮಿರವರು ಮಾತನಾಡಿ
ಇದೊಂದು ಉತ್ತಮ ಕೆಲಸ. ಇಂಡಿಯಾವನ್ನು ಡಿಜಿಟಲ್ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಸಂಸ್ಥೆ ಅತೀ ಅಗತ್ಯ. ಡಿಜಿಟಲ್ ಇಂಡಿಯಾ ದೇಶ ಬೆಳವಣಿಗೆಯ ಭಾಗವಾಗಿದೆ. ಸೇವೆ ಎಂದರೆ ಅದು ವಿಶ್ವಾಸದಿಂದ ಕೂಡಿರಬೇಕು. ಒಮ್ಮೆ ಬಂದ ಗ್ರಾಹಕರು ಇನ್ನೊಮ್ಮೆ ಬರುವಂತಾಗಬೇಕು. ಜಾತಿ ಮತ ಮರೆತು ಸೇವೆ ನೀಡುವ ಕೆಲಸ ನಮ್ಮದಾಗಬೇಕು ಎಂದರು.
ಭಾರತ್ ಗ್ರೂಪ್‌ನ ಪಾಲುದಾರರಾದ ಹರೀಶ್ ಎಂ. ಶೆಟ್ಟಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ, ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬರಾದ ಆರಿಸ್ ಭಾಖವಿ, ಸಾಮಾಜಿಕ ಮುಖಂಡ ಶಾಕೀರ್ ಅಳಕೆಮಜಲು, ಐಕ್ಯ ವೇದಿಕೆ ಅಧ್ಯಕ್ಷ ಹನೀಫ್ ಬಗ್ಗುಮೂಲೆ, ವೈಫ್ರೆಂಡ್ಸ್ ನ ಸಿದ್ದಿಕ್ ಸೂರ್ಯ, ಪಂತಡ್ಕ ಮದರಸದ ಅಧ್ಯಾಪಕರಾದ ಜಾಫರ್ ಸಾದಿಕ್ ಪೈಝಿ ಮೊದಲಾದವರು ಆಗಮಿಸಿ ಶುಭಹಾರೈಸಿದರು. ಪತ್ರಕರ್ತ ಲತೀಪ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಭಾರತ್ ವಂದಿಸಿದರು.

ಎಲ್ಲವೂ ಒಂದೇ ಸೂರಿನಲ್ಲಿ:
ಸಂಸ್ಥೆಯಲ್ಲಿ ಎಲ್ಲಾ ವಿಧದ ಆನ್ ಲೈನ್ ಸೇವೆಗಳು, ವಾಹನಗಳ ವಾಯುಮಾಲಿನ್ಯ ತಪಾಸಣೆ, ವಾಹನಗಳ ಇನ್ಶ್ಯೂರೆನ್ಸ್, ಬಸ್ಸು, ವಿಮಾನ, ರೈಲುಗಳ ಟಿಕೇಟ್ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8951271449 , 6360943710 ಯನ್ನು ಸಂಪರ್ಕಿಸಬಹುದಾಗಿದೆ.
ಉಚಿತ ಟೀಶರ್ಟ್:
ಸಂಸ್ಥೆಯ ಶುಭಾರಂಭದ ಪ್ರಯುಕ್ತ ಸೆ.3ರಿಂದ ಸೆ.5ರ ವರೆಗೆ ಸಂಸ್ಥೆಯಲ್ಲಿ ವಾಹನಗಳ ಇನ್ಸೂರೆನ್ಸ್ ಹಾಗೂ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸುವವರಿಗೆ ಉಚಿತವಾಗಿ ಟೀ ಶರ್ಟ್ ಲಭಿಸಲಿದೆ.





