September 3, 2026

ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ತುಳು ಪರ್ಬ ಎಂಬ ವಿನೂತನ ಶೈಲಿಯ ಕಾರ್ಯಕ್ರಮ

0
image_editor_output_image1053718934-1788449895556

ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ ಇದರ ಆಶ್ರಯದಲ್ಲಿ ದಿನಾಂಕ 3/9/2026 ನೇ ಗುರುವಾರದಂದು ‘ತುಳು ಪರ್ಬ’ ಎಂಬ ವಿನೂತನ ಶೈಲಿಯ ಕಾರ್ಯಕ್ರಮವನ್ನು ನಡೆಸಲಾಯಿತು .

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶಾಲಾ ಸಂಚಾಲಕರಾದ ವಂ. ಫಾ.ಮೈಕಲ್ ಲೋಬೋ, ಮುಖ್ಯ ಅತಿಥಿಯಾಗಿ ತುಳುನಾಡ ರಂಗಬೊಳ್ಳಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀಯುತ ರವಿ ರಾಮಕುಂಜ ಇವರು ಉಪಸ್ಥಿತರಿದ್ದರು

ಹಾಗೆಯೇ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾಗಿರುವ ಶ್ರೀಯುತ ವೆಲೇರಿಯನ್ ವೇಗಸ್, ಶಾಲಾ ಪ್ರಾಂಶುಪಾಲರಾದ ವಂ. ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಸಿ. ಮರೀನಾ, ಸಿಸ್ಟರ್ ಜಾನೆಟ್ ಉಪಸ್ಥಿತರಿದ್ದರು. ಅತಿಥಿ ಅಭ್ಯಾಗತರನ್ನು ವಿದ್ಯಾರ್ಥಿಗಳು ಕಲಶ ಹಿಡಿದು, ಚೆಂಡೆ, ಯಕ್ಷಗಾನದೊಂದಿಗೆ ಸಭಾಂಗಣಕ್ಕೆ ಗೌರವಯುತವಾಗಿ ಬರಮಾಡಿಕೊಂಡರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಅಭ್ಯಾಗತರನ್ನು ಸಹ ಶಿಕ್ಷಕಿ ಶ್ರೀಮತಿ ಚೈತ್ರ ಇವರು ಸ್ವಾಗತಿಸಿ ಗೌರವಿಸಿದ್ದರು. ತುಳುನಾಡ ಸಂಪ್ರದಾಯದಂತೆ ವೀಳ್ಯ ಹಾಗೂ ಅಡಿಕೆ ನೀಡಿ ಸ್ವಾಗತಿಸಲಾಯಿತು.

ತದನಂತರ ಜ್ಯೋತಿ ಬೆಳಗಿ ಕಲ್ಪವೃಕ್ಷದ ಹಿಂಗಾರವನ್ನು ಅರಳಿಸಿ, ಕಲಶಕ್ಕೆ ಭತ್ತವನ್ನು ಹಾಕಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಉದ್ಘಾಟಿಸಲಾಯಿತು. ಮುಖ್ಯ ಅತಿಯಾಗಿ ಉಪಸ್ಥಿತರಿದ್ದ ಶ್ರೀಯುತ ರವಿ ರಾಮಕುಂಜ ಇವರನ್ನು ಗೌರವಯುತವಾಗಿ ಸನ್ಮಾನಿಸಲಾಯಿತು.

ಸನ್ಮಾನಿತರು ತಮ್ಮ ಮಾತಿನೊಂದಿಗೆ ತುಳುನಾಡಿನ ವಿಶೇಷತೆಯ ಕುರಿತು ತಿಳಿ ಹೇಳಿ, ಹಾಸ್ಯ ನಗೆಯೊಂದಿಗೆ ಎಲ್ಲರನ್ನು ರಂಜಿಸಿದರು. ತುಳು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅಧ್ಯಕ್ಷ ನೆಲೆಯಲ್ಲಿ ಶಾಲಾ ಸಂಚಾಲಕರು ಮಾತನಾಡಿ ತುಳುನಾಡಿನ ವಿಶೇಷತೆಯನ್ನು ಹಾಡಿಕೊಂಡಾಡಿದರು. ಸಹಶಿಕ್ಷಕ ಜಯರಾಮ ಶಾಸ್ತ್ರಿ ಇವರು ಎಲ್ಲರಿಗೂ ವಂದನೆಗೈದರು. ಸಭಾಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಇದರಲ್ಲಿ ಹಾಡು, ನೃತ್ಯ, ಭಾಷಣ ಹಾಗೂ ತುಳುನಾಡ ವೈಭವ ಎಂಬ ವಿನೂತನ ಶೈಲಿಯ ಅತ್ಯದ್ಭುತ ಕಾರ್ಯಕ್ರಮಗಳೊಂದಿಗೆ ಆಧುನಿಕ ಭರಾಟೆಯಲ್ಲಿ ದೂರವಾಗುತ್ತಿರುವ ತುಳುನಾಡಿನ ಕಲೆ ಸಂಸ್ಕೃತಿ ಯನ್ನು ಯುವಜನಕ್ಕೆ ನೆನಪಿಸುವ ಮೂಲಕ ತುಳು ಪರ್ಬ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ತುಂಬಿದರು. ಕಾರ್ಯಕ್ರಮದ ವಿಶೇಷ ಅಂಗವಾಗಿ ತುಳುನಾಡ ತಿಂಡಿ ತಿನಿಸುಗಳ ಪ್ರದರ್ಶನ, ವಿವಿಧ ಔಷಧೀಯ ಸಸ್ಯಗಳನ್ನು, ಐತಿಹಾಸಿಕ ವಿಶೇಷತೆಗಳನ್ನು, ತುಳುನಾಡ ಹಳೇಯ ಕಾಲದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮವನ್ನು ಸಂಪೂರ್ಣವಾಗಿ ತುಳುಭಾಷೆಯಲ್ಲೇ ನೆರವೇರಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!